ಕರ್ನಾಟಕ

karnataka

ETV Bharat / bharat

ತಾಳಿ ಕಟ್ಟುವ ಶುಭವೇಳೆ ವಧು ಸಾವು; ಸೂತಕದ ಮನೆಯಲ್ಲಿ ಮದುಮಗಳ ಸಹೋದರಿಯ ವರಿಸಿದ ವರ

ತಾಳಿ ಕಟ್ಟುವ ಸಮಯದಲ್ಲಿ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದು, ಅದೇ ವೇಳೆ ವಧುವಿನ ತಂಗಿಯ ಜೊತೆ ಕುಟುಂಬಸ್ಥರು ಮದುವೆ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ.

bride dies during marriage groom gets married to her younger sister, bride dies during marriage, etawah news, etawah today news, ಮದುವೆ ವೇಳೆ ಕುಸಿದು ಬಿದ್ದು ವಧು ಸಾವು, ಇಟಾವಾದಲ್ಲಿ ಮದುವೆ ವೇಳೆ ಕುಸಿದು ಬಿದ್ದು ವಧು ಸಾವು, ಇಟಾವಾ ಸುದ್ದಿ, ಇಟಾವಾ ಮದುವೆ ಸುದ್ದಿ,
ಮದುಮಗಳ ಸಹೋದರಿಯನ್ನು ವರಿಸಿದ ವರ

By

Published : May 31, 2021, 9:56 AM IST

ಇಟಾವಾ(ಉತ್ತರ ಪ್ರದೇಶ): ವಿವಾಹದ ಸಂದರ್ಭದಲ್ಲಿ ವಧು ಸಾವನ್ನಪ್ಪಿದ್ದು, ವರನಿಗೆ ವಧುವಿನ ಸಹೋದರಿಯ ಜೊತೆ ಕುಟುಂಬಸ್ಥರು ಮದುವೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ

ಭರ್ಥನಾ ಪೊಲೀಸ್​ ಠಾಣಾ ವ್ಯಾಪ್ತಿಯ ಸಮಸ್ಪುರ ಗ್ರಾಮದ ಮಂಜೇಶ್​ ಕುಮಾರ್​ ಮದುವೆ ಸುರಭಿ ಎಂಬ ಯುವತಿಯ ಜೊತೆ ನಿಶ್ಚಯವಾಗಿತ್ತು. ಎರಡು ಕುಟುಂಬಸ್ಥರಿಂದ ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ಮದುವೆಪೂರ್ವ ಕಾರ್ಯಕ್ರಮಗಳು ಸಂಪೂರ್ಣಗೊಂಡಿದ್ದವು. ಮದುವೆ ದಿನ ತಾಳಿ ಕಟ್ಟುವ ಸಮಯದಲ್ಲಿ ವಧುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ದಿಢೀರ್ ಕುಸಿದು ಬಿದ್ದಿದ್ದಾಳೆ. ಕೂಡಲೇ ಗ್ರಾಮಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಸುರಭಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಚಿತ್ರದಲ್ಲಿ ಗುರುತಿಸಿರುವ ಯುವತಿ ಮಧುಮಗಳ ಸಹೋದರಿ

ಈ ವೇಳೆ ಸಂತೋಷದಿಂದ ಕೂಡಿದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿತು. ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಇಂತಹ ಸಂದರ್ಭದಲ್ಲಿ ಎರಡು ಕುಟುಂಬಸ್ಥರ ನಡುವೆ ಮತ್ತೆ ಮಾತುಕತೆಗಳು ನಡೆದವು. ಚರ್ಚೆ ಬಳಿಕ ಮೃತ ಸುರಭಿ ಕಿರಿಯ ಸಹೋದರಿ ನಿಶಾ ಜೊತೆ ಮದುವೆ ಮಾಡಿಕೊಳ್ಳಲು ವರ ಮತ್ತು ಆತನ ಕುಟುಂಬಸ್ಥರು ರಾಜಿಯಾದರು. ಸುರಭಿ ಮೃತದೇಹವನ್ನು ಮನೆಯಲ್ಲಿಟ್ಟು ಆಕೆಯ ತಂಗಿ ನಿಶಾ ಮದುವೆ ಮಾಡಿದರು. ಮದುವೆ ಕಾರ್ಯಕ್ರಮಗಳು ಮುಗಿದ ಬಳಿಕ ಸುರಭಿಯ ಮೃತದೇಹದ ಅಂತ್ಯಕ್ರಿಯೆ ನಡೆಯಿತು.

ABOUT THE AUTHOR

...view details