ನಿಜಾಮಾಬಾದ್(ತೆಲಂಗಾಣ):ಅದು ಮದುವೆ ಮನೆ. ಬಂಧು ಮಿತ್ರರೆಲ್ಲಾ ಆಗಮಿಸಿದ್ದರು. ಮಗಳ ಮದುವೆಗೆಂದು ಪೋಷಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಲ್ಲಿ ವಿಧಿಯಾಟವೇ ಬೇರೆ ಇತ್ತು.
ಹಸೆಮಣೆ ಏರಬೇಕಿದ್ದ ವಧು ರೈಗಳ ರವಳಿ (25) ಎಂಬಾಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ತೆಲಂಗಾಣದ ನಿಜಾಮಾಬಾದ್ನಲ್ಲಿ 12.15 ರ ಶುಭ ಮುಹೂರ್ತದಲ್ಲಿ ಮದುವೆ ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ಯುವತಿ ಸಾವಿಗೆ ಶರಣಾಗಿದ್ದು ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.