ಕರ್ನಾಟಕ

karnataka

ETV Bharat / bharat

ಮುಂದಿನ ವಾರ ಜನ್ಮದಿನ.. ಮದುವೆ ದಿನವೇ ನೇಣಿಗೆ ಶರಣಾದ ವಧು! - ವಧು ರವಳಿ ಆತ್ಮಹತ್ಯೆ

ಭಾನುವಾರ ಮದುವೆ, ಡಿಸೆಂಬರ್​ 17 ಅಂದ್ರೆ ಮುಂಬರುವ ಶನಿವಾರ ಆ ವಧುವಿನ ಜನ್ಮದಿನ.. ಆದರೆ ಮದುವೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವಾಗ ವಧು ನೇಣಿಗೆ ಶರಣಾಗಿರುವ ದುರಂತ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

Bride commits suicide  Bride commits suicide on wedding day  Bride commits suicide on wedding day in Telangana  ಮದುವೆ ದಿನವೇ ನೇಣಿಗೆ ಶರಣಾದ ವಧು  ಮುಂದಿನ ವಾರ ಜನ್ಮದಿನ  ವಧು ನೇಣಿಗೆ ಶರಣಾಗಿರುವ ದುರಂತ  ಮದುವೆ ಆಗಬೇಕಿದ್ದ ವಧು ಸಾವಿನ ಮಡಿಲಿಗೆ  ಮಂಗಳವಾದ್ಯಗಳು ಕೇಳಬೇಕಾಗಿದ್ದ ಮನೆಯಲ್ಲಿ ಸಾವಿನ ಸದ್ದು  ವಧು ರವಳಿ ಆತ್ಮಹತ್ಯೆ  ರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ಕರೆ
ಮದುವೆ ದಿನವೇ ನೇಣಿಗೆ ಶರಣಾದ ವಧು

By

Published : Dec 12, 2022, 2:04 PM IST

ನಿಜಾಮಾಬಾದ್, ತೆಲಂಗಾಣ:ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ ಆಗಬೇಕಿದ್ದ ವಧು ಸಾವಿನ ಮಡಿಲಿಗೆ ಜಾರಿದ್ದಾರೆ. ಮಂಗಳವಾದ್ಯಗಳು ಕೇಳಬೇಕಾಗಿದ್ದ ಮನೆಯಲ್ಲಿ ಸಾವಿನ ಸದ್ದು ಮೊಳಗಿತು. ಈ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ನವಿಪೇಟ್ ತಾಲೂಕು ಕೇಂದ್ರದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ಪೊಲೀಸರು ಮತ್ತು ಕುಟುಂಬ ಸದಸ್ಯರ ಪ್ರಕಾರ, ನವಿಪೇಟೆಯ ರಾಯಗಲ್ಲ ರವಳಿ (26) ಎರಡು ವರ್ಷಗಳ ಹಿಂದೆ ಎಂಸಿಎ ಮುಗಿಸಿದರು. ಆಗಸ್ಟ್ 21 ರಂದು ನಿಜಾಮಾಬಾದ್ ನಗರದ ಸಾಫ್ಟ್‌ವೇರ್ ಇಂಜಿನಿಯರ್ ಸಂತೋಷ್ (28) ಅವರೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಇವರ ಮದುವೆ ಭಾನುವಾರ ಮಧ್ಯಾಹ್ನ ನಡೆಯಬೇಕಾಗಿತ್ತು. ಆದರೆ ಅದೇ ದಿನ ವಧು ರವಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ರವಳಿ ಪೋಷಕರಾದ ಪ್ರಭಾಕರ್ ಮತ್ತು ಉಮಾರಾಣಿ ನಿದ್ರೆಯಿಂದ ಎದ್ದಿದ್ದಾರೆ. ಜೊತೆಯಲ್ಲಿ ಮಲಗಿದ್ದ ಮಗಳ ಕಾಣದಿದ್ದಾಗ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆಗ ಲಗೇಜ್ ರೂಮಿನ ಬಾಗಿಲು ತೆರೆದು ನೋಡಿದಾಗ ರವಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತಮ್ಮ ಮಗಳ ಶವವನ್ನು ನೋಡಿದ ಪೋಷಕರ ರೋದನೆ ಮುಗಿಲು ಮುಟ್ಟಿತ್ತು. ತಮ್ಮ ಮಗಳ ಮೃತ ದೇಹವನ್ನು ಕೆಳಗೆ ಇಳಿಸಿ ರೋದಿಸಿ ತೊಡಗಿದರು. ಮಗಳ ಆತ್ಮಹತ್ಯೆಗೆ ಅಳಿಯ ಸಂತೋಷ್ ಕಿರುಕುಳವೇ ಕಾರಣ ಎಂದು ಪ್ರಭಾಕರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಶನಿವಾರ ರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿದ್ದಾಗಿ ಮಲಗುವ ಮುನ್ನ ಮಗಳು ಹೇಳಿದ್ದಳು. ಸಂತೋಷ್ ಮೂರು ತಿಂಗಳಿನಿಂದ ನನ್ನ ಮಗಳಿಗೆ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿ ಕುಟುಂಬದ ಆಸ್ತಿಯಲ್ಲಿ ಪಾಲು ನೀಡುವಂತೆ ಹಾಗೂ ಮದುವೆಯಾದ ನಂತರ ಕೆಲಸಕ್ಕೆ ಹೋಗುವಂತೆ ಹೇಳುತ್ತಿದ್ದ ಎಂದು ಪ್ರಭಾಕರ್ ಆರೋಪಿಸಿದ್ದಾರೆ.

ಪ್ರಭಾಕರ್ ದೂರಿನ ಮೇರೆಗೆ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ಎಸ್​ಎಸ್ ರಾಜಾ ರೆಡ್ಡಿ ತಿಳಿಸಿದ್ದಾರೆ. ಆದರೆ ವಧು ರವಳಿ ಆತ್ಮಹತ್ಯೆಗೆ ನಾನು ಕಾರಣನಲ್ಲ ಎಂದು ವರ ಸಂತೋಷ್ ಬಿಡುಗಡೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

4 ತಿಂಗಳಿಂದ ಫೋನ್​ನಲ್ಲಿ ಮಾತನಾಡುತ್ತಿರುವುದು ನಿಜ. ಆದರೆ ನಾನು ಯಾವತ್ತೂ ಆಕೆಗೆ ಕಿರುಕುಳ ನೀಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಆತ್ಮಹತ್ಯೆಯ ನಿಖರ ಕಾರಣ ಪೊಲೀಸರ ತನಿಖೆಯ ನಂತರವೇ ತಿಳಿಯಲಿದೆ.

ಓದಿ:ಮೆದುಳು ನಿಷ್ಕ್ರಿಯವಾಗಿದ್ದ ಮಗನ ಅಂಗಾಂಗ ದಾನ.. ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ..

ABOUT THE AUTHOR

...view details