ಜಬಲ್ಪುರ(ಮಧ್ಯಪ್ರದೇಶ) : ಮದುವೆ ಮಾಡಿಕೊಂಡು ಎರಡ್ಮೂರು ದಿನ ಗಂಡನ ಜೊತೆ ಎಂಜಾಯ್ ಮಾಡಿದ ಬಳಿಕ ಹಣ - ಆಭರಣ ದೋಚಿ ಪರಾರಿಯಾಗುತ್ತಿದ್ದ ಸುಂದರಿ ಮತ್ತು ಆಕೆಯ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ.
ಏನಿದು ಘಟನೆ:ಬಂಧಿತ ವಧು ರೇಣುಕಾಳ ನಿಜವಾದ ಹೆಸರು ಉರ್ಮಿಳಾ ಬರ್ಮನ್. ಈಕೆ ಮದುವೆ ಮಾಡಿಕೊಂಡು ವರ ಕುಟುಂಬಕ್ಕೆ ಮೋಸ ಮಾಡುವ ಗ್ಯಾಂಗ್ವೊಂದು ಕಟ್ಟಿಕೊಂಡಿದ್ದಳು. ಉರ್ಮಿಳಾ ಗ್ಯಾಂಗ್ನಲ್ಲಿ ಸುಮಾರು 10ಕ್ಕೂ ಹೆಚ್ಚು ಜನರಿದ್ದಾರೆ. ಉರ್ಮಿಳಾ ಗುರು - ಹಿರಿಯರ ಮಧ್ಯೆ ಮದುವೆ ಮಾಡಿಕೊಂಡು ಒಂದರೆಡು ದಿನಗಳ ಕಾಲ ಗಂಡನೊಂದಿಗೆ ಮನೆಯಲ್ಲಿದ್ದು, ಬಳಿಕ ಸಮಯ ಸಿಕ್ಕಾಗ ಹಣ - ಆಭರಣ ಲೂಟಿ ಮಾಡಿ ತನ್ನ ಗ್ಯಾಂಗ್ ಜೊತೆ ಎಸ್ಕೇಪ್ ಆಗುತ್ತಿದ್ದಳು.
ಓದಿ:ಫೇಸ್‌ಬುಕ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ; ಶ್ರೀಮಂತಿಕೆಯಲ್ಲಿ ಅದಾನಿ, ಅಂಬಾನಿ ನಂತರದ ಸ್ಥಾನಕ್ಕೆ ಇಳಿಕೆ..
ವಯಸ್ಸಾದ ಬ್ರಹ್ಮಚಾರಿಗಳಿಗೆ ಗಾಳ:ಈಕೆಯ ಗ್ಯಾಂಗ್ ವಯಸ್ಸಾದ ಮೇಲೂ ಮದುವೆಯಾಗದ ಬ್ರಹ್ಮಚಾರಿಗಳ ಹುಡುಕಾಟದಲ್ಲಿ ಇರುತ್ತಾರೆ. ಬಳಿಕ ಅವರೊಂದಿಗೆ ಪರಿಚಯ ಬೆಳೆಸಿಕೊಳ್ಳುತ್ತಾರೆ. ನಿಮಗೊಂದು ಸುಂದರ ಹುಡುಗಿ ಜೊತೆ ಮದುವೆ ಮಾಡಿಕೊಡುವುದಾಗಿ ವರ ಮತ್ತು ವರನ ಕುಟುಂಬಸ್ಥರಿಗೆ ನಂಬಿಕೆ ಹುಟ್ಟಿಸಿ ಹಣ ಪಡೆಯಲು ಶುರು ಮಾಡುತ್ತಾರೆ.
ವರನೊಂದಿಗೆ ಮದುವೆಯಾದ ಬಳಿಕ ಒಬ್ಬೊಬ್ಬರಾಗಿ ಗಂಡನ ಮನೆಯಿಂದ ತೊರೆಯಲಾರಂಭಿಸುತ್ತಾರೆ. ಕೊನೆಯಾದಾಗಿ ಉರ್ಮಿಳಾ ಬಂಗಾರ - ಹಣ ಲೂಟಿ ಮಾಡಿ ಅಲ್ಲಿಂದ ಎಸ್ಕೇಪ್ ಆಗುತ್ತಾಳೆ. ರಾಜಸ್ಥಾನದ ಜೈಪುರ, ಕೋಟಾ, ಧೋಲ್ ಪುರ ಹಾಗೂ ಮಧ್ಯಪ್ರದೇಶದ ದಾಮೋಹ್, ಸಾಗರ್, ಜಬಲ್ಪುರ ಸೇರಿ ಸುಮಾರು ಎಂಟು ಮದುವೆ ಮಾಡಿಕೊಂಡಿರುವ ಈ ಸುಂದರಿ ವರನ ಕುಟುಂಬಗಳಿಗೆ ವಂಚಿಸಿ ಪರಾರಿಯಾಗುತ್ತಿದ್ದಳು.