ವಾರಾಣಸಿ (ಉತ್ತರಪ್ರದೇಶ): ಮದ್ಯ ಸೇವನೆ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೇ ಮದುವೆಗೂ ಆಪತ್ತು ತರುತ್ತದೆ ಎಂಬುದು ವಾರಾಣಸಿಯಲ್ಲಿ ಸಾಬೀತಾಗಿದೆ. ಹೌದು ಇಲ್ಲಿಯ ಹರ್ಹುವಾದನ ಚೌಬೆಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರ ಯುವಕನ ವಿವಾಹವು ಜನ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ಮದುವೆಗಾಗಿ ಹರ್ಹುವಾದಲ್ಲಿ ಕಲ್ಯಾಣ ವೇದಿಕಯೆನ್ನೂ ಸಿದ್ದಗೊಳಿಸಿಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ವಧು ವರರು ಸಪ್ತಪದಿ ತುಳಿಯುತ್ತಿದ್ದರು. ಆದರೆ, ಮಧ್ಯ ತಂದ ಆಪತ್ತಿನಿಂದ ಮದುವೆಯೆ ಮುರಿದು ಬಿದ್ದಿದೆ.
ಭಾನುವಾರ ಸಂಜೆ, ವರನ ಆಗಮನದ ಮೆರವಣಿಗೆ ವಿಜೃಂಭಣೆ ಸಾಗಿತ್ತು. ಕಲ್ಯಾಣ ವೇದಿಕೆಗೂ ತಲುಪಿತ್ತು. ವಧುವಿನ ಕುಟುಂಬಸ್ಥರು ವರನ ಕಡೆಯವರನ್ನು ಸ್ವಾಗತಿಸಿತ್ತಿದ್ದರು. ದ್ವಾರಪೂಜೆ ಮುಗಿದ ನಂತರ ಹೂಮಾಲೆ ಬದಲಾವಣೆ ವರ ತನ್ನ ಸ್ನೇಹಿತರೊಂದಿಗೆ ವೇದಿಕೆ ಬಂದಿದ್ದಾನೆ. ಬಳಿಕ ಸ್ವಲ್ಪ ಸಮಯದಲ್ಲೇ ವಧುವೂ ತನ್ನ ಸ್ನೇಹಿತರೊಂದಿಗೆ ವೇದಿಕೆ ತಲುಪಿದ್ದಾರೆ. ಇನ್ನೇನು ಹೂಮಾಲೆ ಬದಲಾವಣೆ ಕಾರ್ಯಕ್ರಮ ಆರಂಭವಾಗಬೇಕು ಎನ್ನುವಷ್ಟರಲ್ಲೇ ಪಾನಮತ್ತರಾಗಿದ್ದ ವರನ ಗೆಳೆಯರು ವಧುವಿನ ಸ್ನೇಹಿತರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದಿದ್ದಾರೆ. ಇದು ವಧು ಮತ್ತು ಆಕೆಯ ಸ್ನೇಹಿತರನ್ನು ಕೆರಳಿಸಿದೆ. ಈ ಸಮಯದಲ್ಲಿ ವರನ ಸ್ನೇಹಿತರು ಕುಡಿದಿದ್ದಾರೆ ಎಂದು ತಿಳಿದು ವಧುವಿನ ಕುಟುಂಬಸ್ಥರು ಗಲಾಟೆಯನ್ನು ಶಾಂತಗೊಳಿಸಿದ್ದಾರೆ.
ಇದಾದ ಬಳಿಕ ಹೂಮಾಲೆ ಬದಲಾವಣೆ ಕಾರ್ಯಕ್ರಮ ಮತ್ತೆ ಆರಂಭವಾಗಿದೆ. ವರನ ಕೊರಳಿಗೆ ಮಾಲೆ ಹಾಕಲು ವಧು ಮುಂದಾಗಿದ್ದ ವೇಳೆ ಮದ್ಯಸೇವನೆ ಮಾಡಿವುದು ತಿಳಿದು ಬಂದಿದೆ. ಇದರಿಂದ ಕೋಪಗೊಂಡ ವಧು ವೇದಿಕೆಯಿಂದ ಕೆಳಗಿಳಿದು ಏನನ್ನು ಹೇಳದೇ ತನ್ನ ಕೋಣೆಗೆ ಹೊರಟು ಹೋಗಿದ್ದಾಳೆ. ವಧುವಿನ ಕುಟುಂಬಸ್ಥರು ಅಚ್ಚರಿಗೊಂಡು ಆಕೆಯ ಕೋಣೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಕುಡುಕ ವರನನ್ನು ಮದುವೆಯಾಗಲ್ಲ ಎಂದು ವಧು ತನ್ನ ಪೋಷಕರಿಗೆ ಹೇಳಿದ್ದಾಳೆ.