ಕರ್ನಾಟಕ

karnataka

ETV Bharat / bharat

Road Accident: ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ ದುರ್ಮರಣ - ಮೌನಿಕಾ

ಮದುವೆಯಾದ ಮೂರೇ ದಿನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ನವ ವಿವಾಹಿತೆ ಹಾಗೂ ಆಕೆಯ ತಂದೆ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ, ತಂದೆ ಸಾವು
ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ, ತಂದೆ ಸಾವು

By

Published : Aug 28, 2021, 5:41 PM IST

ಹೈದರಾಬಾದ್​(ತೆಲಂಗಾಣ): ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಅವಘಡದಲ್ಲಿ ಆಕೆಯ ತಂದೆ ಸಹ ಪ್ರಾಣ ಕಳೆದುಕೊಂಡಿದ್ದಾರೆ. ನಿರ್ಮಲ ಜಿಲ್ಲೆಯ ಮಾದಿಪದಗದಲ್ಲಿ ಈ ಘಟನೆ ನಡೆದಿದೆ.

ಮೌನಿಕಾ (25), ತಂದೆ ರಾಜಯ್ಯ (50) ಮೃತದುರ್ದೈವಿಗಳು. ನಿರ್ಮಲ ಜಿಲ್ಲೆಯ ಕೊಡೆಮ್​ ವಲಯದ ಪಾಂಡವಪುರ್​ ಬಳಿ ಕಣಿವೆಯೊಂದಕ್ಕೆ ಕಾರು ಉರುಳಿ ಬಿದ್ದು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ಆರತಕ್ಷತೆ​ ಮುಗಿಸಿಕೊಂಡು ಹಿಂದಿರುಗುವಾಗ ಅವಘಡ ಸಂಭವಿಸಿದೆ.

ಆಗಸ್ಟ್​ 25ರಂದು ಮಹಾರಾಷ್ಟ್ರದ ಬಲಹರ್ಷಾ ಮೂಲದ ವರ ಜನಾರ್ದನ್ ಜತೆ ಮೌನಿಕಾ ಮದುವೆ ನಡೆದಿತ್ತು. ಸಾವಿನಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ವರ ಜನಾರ್ದನ್​ ಕೂಡ ಅದೇ ಕಾರಿನಲ್ಲಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ: ಆರೋಪಿಗಳು ಮೈಸೂರಿಗೆ ಬಂದಿದ್ದೇಕೆ? ರೇಪ್​​ ಎಸಗಿದ್ದು ಯಾಕೆ? ಚಾಮುಂಡಿ ಬೆಟ್ಟದ ಬಳಿ ನಡೆದ ಆ ಘೋರ ಕೃತ್ಯದ ಕಂಪ್ಲೀಟ್​ ಡಿಟೇಲ್ಸ್

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೌನಿಕಾ ಹಾಗೂ ರಾಜಯ್ಯ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ABOUT THE AUTHOR

...view details