ಮದುವೆಯ ವೇಳೆ ವಧು ಮತ್ತು ವರ ಚೆಂದ ಚೆಂದದ ಹೂವಿನ ಹಾರಗಳನ್ನು ಕೊರಳಿನಲ್ಲಿ ಹಾಕಿಕೊಂಡು ಮೆರೆಯುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಂದು ನವಜೋಡಿ ಜೀವಂತ ಹಾವುಗಳನ್ನೇ ಹಾರವನ್ನಾಗಿ ಪರಸ್ಪರ ಬದಲಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹಾವು ಕಂಡರೆ ಮಾರುದ್ದ ದೂರ ಓಡುವ ಹುಡುಗಿಯರ ಪೈಕಿ ಈ ವಧು ಸ್ವಲ್ಪ ಭಿನ್ನವೇ ಅನ್ನಬಹುದು. ವರ ದೊಡ್ಡ ಹೆಬ್ಬಾವನ್ನು ತಂದು ಕೊರಳಿಗೆ ಹಾಕಿದರೂ ಭಯಪಡದೇ ಹಾರವನ್ನಾಗಿ ಸ್ವೀಕರಿಸಿದ್ದಾಳೆ. ಇದಾದ ಬಳಿಕ ವಧು ಕೂಡ ನಾಗರಹಾವನ್ನು ವರನ ಕೊರಳಿಗೆ ಹಾಕಿದ್ದಾಳೆ. ವಧು- ವರರಿಬ್ಬರೂ ಯಾವ ಭಯವಿಲ್ಲದೇ, ಹಾವನ್ನು ಹಾರದಂತೆ ಬದಲಿಸಿಕೊಂಡಿದ್ದನ್ನು ನೂರಾರು ಜನರು ಸುತ್ತಲೂ ನಿಂತುಕೊಂಡು ನೋಡಿದ್ದಾರೆ.