ನರಸಿಂಗಪುರ(ಮಧ್ಯಪ್ರದೇಶ) : ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆ ಸಮಾರಂಭವೊಂದರಲ್ಲಿ ವಧು-ವರ ರಕ್ತದಾನ ಮಾಡಿದ್ದು, ಅವರ ಈ ನಡೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿದೆ.
ಜಿಲ್ಲೆಯ ತಹಸಿಲ್ ಗದರ್ವಾರಾದಲ್ಲಿ ಒಂದು ತಿಂಗಳ ಹಿಂದೆ ಆಶಿಶ್ ರೈ ಮತ್ತು ಖುಷ್ಬೂ ರೈ ಮದುವೆಯಾದರು. ಈ ಸಮಯದಲ್ಲಿ ಇಬ್ಬರೂ ರಕ್ತದಾನ ಮಾಡಿದ್ದು, ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಆಶಿಶ್ ರೈ ಕಳೆದ 12 ವರ್ಷಗಳಿಂದ ಶ್ರೀ ಸಾಯಿ ಶ್ರದ್ಧಾ ಸೇವಾ ಸಮಿತಿಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದು, ಈವರೆಗೆ 18 ಬಾರಿ ರಕ್ತದಾನ ಮಾಡಿದ್ದಾರೆ. ಮದುವೆಯ ಶುಭ ಸಮಾರಂಭದಲ್ಲೂ ಆಶಿಶ್ ಮಾತ್ರವಲ್ಲದೆ, ಆತನ ಕೈ ಹಿಡಿಯುವ ಯುವತಿಯೂ ರಕ್ತದಾನ ಮಾಡಿದ್ದಾಳೆ.