ಲಕ್ನೋ (ಉತ್ತರ ಪ್ರದೇಶ):ಮದುವೆ ಮಂಟಪ ಸಿದ್ಧವಾಗಿದ್ದು, ಮದುವೆ ಮನೆಯವರು ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದರು. ಅಷ್ಟರಲ್ಲಿ ವಧು ಮನೆಯಿಂದ ಓಡಿ ಹೋಗಿದ್ದಾಳೆ. ಸ್ನೇಹಿತರ ಜೊತೆ ರೆಡಿಯಾಗಲು ಬ್ಯೂಟಿ ಪಾರ್ಲರ್ಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಯುವತಿ, ನಂತರ ವಾಪಸ್ ಬರಲಿಲ್ಲ. ಸಂಬಂಧಿಕರು ಆಕೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಯುವತಿ ಪತ್ತೆಯಾಗಿಲ್ಲ. ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕೇಜ್ರಿವಾಲ್ ಬಂಗಲೆ ವಿವಾದ: ಅಜಯ್ ಮಾಕೆನ್ ದೂರಿನ ಬಗ್ಗೆ 7 ದಿನಗಳಲ್ಲಿ ವರದಿ ಕೇಳಿದ ಎಲ್ಜಿ
ಪೊಲೀಸರು ಹೇಳಿದ್ದೇನು?:''ಹಳೆ ಮಹಾನಗರದ ಎ-ಸೆಕ್ಟರ್ನಲ್ಲಿ ವಾಸಿಸುವ ವ್ಯಕ್ತಿಯೊಬ್ಬರ ಮಗಳ ಮದುವೆ ಕಾರ್ಯಕ್ರಮ ಮೇ 5ರಂದು ನಡೆಬೇಕಿತ್ತು. ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಹುಡುಗಿಯ ಕಡೆಯವರು ಮದುವೆಯ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದರು. ಅನೇಕ ಸಂಬಂಧಿಕರು ಕೂಡ ಮನೆಗೆ ಬಂದಿದ್ದರು. ಮದುವೆಯ ಬಗ್ಗೆ ಮನೆಯವರು ತುಂಬಾ ಸಂತೋಷಪಟ್ಟಿದ್ದರು. ಮದುವೆ ಕಾರ್ಯಕ್ರಮಕ್ಕೂ ಮುನ್ನವೇ ವಧು ತನ್ನ ಸ್ನೇಹಿತರೊಂದಿಗೆ ಬ್ಯೂಟಿ ಪಾರ್ಲರ್ಗೆ ರೆಡಿಯಾಗಲು ಹೋಗಿದ್ದಾಳೆ. ಆ ನಂತರ ಬಹಳ ಹೊತ್ತಾದರೂ ಆಕೆ ಹಿಂತಿರುಗಿರಲಿಲ್ಲ ಎಂದು ಪೊಲೀಸ್ ಠಾಣೆಯ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.