ಮೊರಾದಾಬಾದ್ : ಅಚ್ಚರಿ ಎನಿಸಿದರೂ ಇದು ಸತ್ಯ.. ಉತ್ತರಪ್ರದೇಶದ ಮೊರಾದಾಬಾದ್(Moradabad)ನಲ್ಲಿ ಅಪಘಾತವೊಂದರಲ್ಲಿ ಸತ್ತಿದ್ದ ವ್ಯಕ್ತಿ 7 ಗಂಟೆಗಳ ನಂತರ ಜೀವಂತ(Man Alive after 7 hours) ವಾಗಿದ್ದಾನೆ.
ಮಜೋಲಾ ಪೊಲೀಸ್ ಠಾಣೆ(Majola Police Station) ವ್ಯಾಪ್ತಿಯ ಶ್ರೀಕೇಶ್ ಎಂಬುವರು ತಡರಾತ್ರಿ ಹಾಲು ತರಲು ಹೋಗುತ್ತಿದ್ದಾಗ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ಆತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಶ್ರೀಕೇಶ್ ಮೃತಪಟ್ಟಿದ್ದಾನೆ ಎಂದು ಘೋಷಿಸಿ ಶವಾಗಾರದಲ್ಲಿ ಇರಿಸಿದ್ದಾರೆ.
ಇಂದು ಬೆಳಗ್ಗೆ ಪೊಲೀಸರು ಮೃತದೇಹದ ಪಂಚನಾಮೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಆಗ ಮೃತದೇಹದ ಮೇಲಿನ ಗಾಯದ ಗುರುತುಗಳನ್ನು ನೋಡಿ ವ್ಯಕ್ತಿ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ನಂತರ ಶ್ರೀಕೇಶ್ ದೇಹವನ್ನು ತಪಾಸಣೆ ನಡೆಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದಾದ ನಂತರ ಅವರು ಜೀವಂತವಾಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.