ನವದೆಹಲಿ: ಇಂಗ್ಲೆಂಡ್ ಬಳಿಕ ದೇಶದಲ್ಲಿ ಇದೀಗ ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪ ಪಡೆದ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ. ಅಲ್ಲದೇ ಪುಣೆಯ ಪ್ರಯೋಗಾಲಯದಲ್ಲಿ ಬ್ರೆಜಿಲ್ ಕೊರೊನಾ ವೈರಸ್ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ.
ಭಾರತದಲ್ಲಿ ಬ್ರೆಜಿಲ್, ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೊನಾ ಕೇಸ್ - ಐಸಿಎಂಆರ್ - ಭಾರತದಲ್ಲಿ ಬ್ರೆಜಿಲ್, ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೊನಾ ಕೇಸ್
ಭಾರತದಲ್ಲಿ ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪ ಪಡೆದ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.
![ಭಾರತದಲ್ಲಿ ಬ್ರೆಜಿಲ್, ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೊನಾ ಕೇಸ್ - ಐಸಿಎಂಆರ್ Brazil, South African strain of COVID19 cases in India](https://etvbharatimages.akamaized.net/etvbharat/prod-images/768-512-10650876-thumbnail-3x2-megha.jpg)
ಫೆಬ್ರವರಿ ಮೊದಲ ವಾರದಲ್ಲಿ ಬ್ರೆಜಿಲ್ ರೂಪಾಂತರ ಕೇಸ್ಗಳು ಪತ್ತೆಯಾಗಿತ್ತು. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಲ್ಯಾಬ್ನಲ್ಲಿ ಈ ವೈರಸ್ ಆರ್ಎನ್ಎ ಇಲ್ಲವೆ ಡಿಎನ್ಎ ಹೊಂದಿದೆಯ ಎಂಬುದನ್ನು ಪ್ರತ್ಯೇಕಿಸಿ ಪರೀಕ್ಷಿಸಲಾಗಿದೆ. ಇದರ ಮೇಲೆ ಲಸಿಕೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸುವ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ಐಸಿಎಂಆರ್ ಡೈರೆಕ್ಟರೇಟ್ ಜನರಲ್ ಡಾ. ಬಲರಾಮ್ ಭಾರ್ಗವ್ ಮಾಹಿತಿ ನೀಡಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 4 ಜನರಲ್ಲಿ ಅಲ್ಲಿ ಹೊಸ ರೂಪ ಪಡೆದ ಕೋವಿಡ್ ಕೇಸ್ ಪತ್ತೆಯಾಗಿದೆ. ಎಲ್ಲ ಪ್ರಯಾಣಿಕರನ್ನು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಐಸೋಲೇಷನ್ಗೆ ಒಳಪಡಿಸಲಾಗಿದೆ. ಈವರೆಗೆ ಭಾರತದಲ್ಲಿ 187 ಮಂದಿಗೆ ಬ್ರಿಟನ್ ಸೋಂಕು ಅಂಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂಗ್ಲೆಂಡ್ ಕೊರೊನಾಗಿಂತ ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದ ಸೋಂಕು ವಿಭಿನ್ನವಾಗಿದೆ ಎಂದು ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.