ನವದೆಹಲಿ:ವಿವಿಧ ದೇಶಗಳಿಗೆ ಭಾರತ ಕೊರೊನಾ ಲಸಿಕೆ ರಫ್ತು ಮಾಡಲು ಶುರು ಮಾಡಿದ್ದು, ಈಗಾಗಲೇ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳಗೆ ಲಸಿಕೆ ಕಳುಹಿಸಿಕೊಟ್ಟಿರುವ ಭಾರತ ಇದೀಗ ಬ್ರೆಜಿಲ್ಗೂ ಕೊವಿಶೀಲ್ಡ್ ವ್ಯಾಕ್ಸಿನ್ ರವಾನೆ ಮಾಡಿದೆ.
ಕೊವಿಶೀಲ್ಡ್ ಲಸಿಕೆ ಬ್ರೆಜಿಲ್ಗೆ ತಲುಪುತ್ತಿದ್ದಂತೆ ಅಲ್ಲಿನ ಅಧ್ಯಕ್ಷ ಜೈರ್ ಎ ಬೋಲ್ಸನಾರೋ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜಾಗತಿ ಸಮಸ್ಯೆ ನಿರಾರಣೆ ಮಾಡಲು ಉತ್ತಮ ಪಾಲುದಾರನಾಗಿರುವ ಭಾರತಕ್ಕೆ ಧನ್ಯವಾದಗಳು. ಭಾರತದಿಂದ ಬ್ರೆಜಿಲ್ಗೆ ಲಸಿಕೆ ರಫ್ತು ಮಾಡಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.