ನವದೆಹಲಿ :ಚೊಚ್ಚಲ ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಉಡಾವಣೆಯು ಮಂಗಳವಾರ ಯಶಸ್ವಿಯಾಗಿದೆ. ಸಮುದ್ರದಲ್ಲಿ ನಿಗದಿತ ನೇರ ಗುರಿಯೊಂದಿಗೆ ಎರಡು ಬಾರಿ ನೌಕಾ ದಳದ ಹಡುಗಿಗೆ ಅಪ್ಪಳಿಸಿದೆ. ಇದರಿಂದ ಹಡುಗು ಮುಳುಗಿದೆ.
ಯುದ್ಧ ನೌಕೆಯಿಂದ ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಪರೀಕ್ಷೆ - ಸಮುದ್ರದಲ್ಲಿ ನಿಗದಿತ ನೇರ ಗುರಿಯೊಂದಿಗೆ ಉಡಾವಣೆ
ಮೊದಲ ಪ್ರಯೋಗದಲ್ಲೇ ಕ್ಷಿಪಣಿಯು ಪ್ರತಿ ಗಂಟೆಗೆ 3 ಸಾವಿರ ಕಿ.ಮೀ ವೇಗದಲ್ಲಿ ಹೋಗಿ ಹಡುಗಿಗೆ ಅಪ್ಪಳಿಸಿದೆ. ನೌಕಾ ಪಡೆ ಮತ್ತು ವಾಯು ಪಡೆ ಪರಸ್ಪರ ಸಹಯೋಗದಲ್ಲಿ ಉಡಾವಣೆ ಮಾಡಿವೆ..
![ಯುದ್ಧ ನೌಕೆಯಿಂದ ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಪರೀಕ್ಷೆ ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಪರೀಕ್ಷೆ](https://etvbharatimages.akamaized.net/etvbharat/prod-images/768-512-15067048-thumbnail-3x2-ran.jpeg)
ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಪರೀಕ್ಷೆ
ಯುದ್ಧ ನೌಕೆಯಿಂದ ಕ್ಷಿಪಣಿಯು ಪ್ರತಿ ಗಂಟೆಗೆ 3 ಸಾವಿರ ಕಿ.ಮೀ ವೇಗದಲ್ಲಿ ಮೊದಲ ಪ್ರಯೋಗದಲ್ಲೇ ಹೋಗಿ ಮತ್ತೆ ಅದೇ ನೌಕೆಗೆ ಅಪ್ಪಳಿಸಿದೆ. ನೌಕಾ ಪಡೆ ಮತ್ತು ವಾಯು ಪಡೆ ಸಹಯೋಗದೊಂದಿಗೆ ಈ ಯಶಸ್ವಿ ಉಡಾವಣೆ ಕಾರ್ಯ ಮಾಡಿದ್ದು, ಎರಡೂ ಪಡೆಗಳ ಪರಸ್ಪರ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಷಿಪಣಿಗಳ ಉಡಾವಣೆಗಳನ್ನು ನಡೆಸಲಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.