ಹೈದರಾಬಾದ್:ನಗರದ ಲಾಡ್ಜ್ವೊಂದರಲ್ಲಿ ಪ್ರೇಮಿಗಳ ಮೃತದೇಹಗಳು ಪತ್ತೆಯಾಗಿವೆ. ಯುವಕನ ಮೃತದೇಹ ನೇಣು ಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾದರೆ ಯುವತಿಯ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದೆ. ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರೇಯಸಿಯ ಕತ್ತು ಕೊಯ್ದ ಪ್ರೇಮಿ; ಕೊನೆಗೆ ತಾನೂ ನೇಣು ಬಿಗಿದುಕೊಂಡ - girlfriend committed suicide
ನಿನ್ನೆ ಮಧ್ಯಾಹ್ನ ಹೋಟೆಲ್ವೊಂದರ ಕೊಠಡಿ ಬಾಡಿಗೆ ಪಡೆದ ಪ್ರೇಮಿಗಳಿಬ್ಬರು ಇಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಯುವತಿಯು ರಕ್ತದ ಮಡುವಿನಲ್ಲಿ ಪ್ರಾಣ ಕಳೆದುಕೊಂಡಿದ್ದರೆ ಯುವಕನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ.

Boyfriend who killed his girlfriend and committed suicide
ಮಾದಾಪೂರ್ನ ಲೇಮನ್ ಟ್ರೀ ಎಂಬ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೆಹಬೂಬ್ ನಗರದ ಸಂತೋಶಿ ಹಾಗೂ ರಾಮುಲು ಮೃತ ಯುವಕ ಮತ್ತು ಯುವತಿ ಎಂದು ಗುರುತಿಸಲಾಗಿದೆ.
ರಾಮುಲು ಮೊದಲು ಪ್ರೇಯಸಿ ಸಂತೋಶಿಯ ಕತ್ತನ್ನು ಬ್ಲೇಡ್‌ನಿಂದ ಕೊಯ್ದು ಕೊಲೆ ಮಾಡಿ ಬಳಿಕ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ನಿನ್ನೆ ಮಧ್ಯಾಹ್ನ ಈ ಜೋಡಿ ಹೋಟೆಲ್ನ ಕೊಠಡಿಯೊಂದನ್ನು ಬುಕ್ ಮಾಡಿಕೊಂಡಿತ್ತು.