ಕರ್ನಾಟಕ

karnataka

ETV Bharat / bharat

ಯುವಕನ ಮರಕ್ಕೆ ಕಟ್ಟಿ ಆತನ ಕಣ್ಣೆದುರೇ ಪ್ರಿಯತಮೆಯನ್ನ ಅತ್ಯಾಚಾರ ಮಾಡಿದ ಕುಡುಕರ ಗ್ಯಾಂಗ್​! - ಕೃಷ್ಣ ಜಿಲ್ಲೆಯಲ್ಲಿ ಯುವತಿ ಅತ್ಯಾಚಾರ

ಮೋಜು ಮಸ್ತಿಗಾಗಿ ಬೀಚ್​ ಹತ್ತಿರ ಬಂದಿದ್ದ ಜೋಡಿ ಮೇಲೆ ಕುಡುಕರ ಗ್ಯಾಂಗ್ ದಾಳಿ ಮಾಡಿದೆ. ಯುವಕನನ್ನು ಮರಕ್ಕೆ ಕಟ್ಟಿ ಆತನ ಕಣ್ಣೆದುರೇ ಲವರ್​ನನ್ನು ಅತ್ಯಾಚಾರ ಮಾಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

young woman raped by Drunkards in Andhra, Woman raped in Krishna drastic, Andhra Pradesh crime news, ಆಂಧ್ರದಲ್ಲಿ ಕುಡುಕರ ಗ್ಯಾಂಗ್​ನಿಂದ ಯುವತಿ ಮೇಲೆ ಅತ್ಯಾಚಾರ, ಕೃಷ್ಣ ಜಿಲ್ಲೆಯಲ್ಲಿ ಯುವತಿ ಅತ್ಯಾಚಾರ, ಆಂಧ್ರಪ್ರದೇಶ ಅಪರಾಧ ಸುದ್ದಿ,
ಲವರ್​ನನ್ನು ಆತನ ಕಣ್ಣೆದುರೇ ಅತ್ಯಾಚಾರ ಮಾಡಿದ ಕುಡುಕರ ಗ್ಯಾಂಗ್

By

Published : Mar 11, 2022, 8:54 AM IST

ಕೃಷ್ಣ( ಆಂಧ್ರಪ್ರದೇಶ):ಯವಕನನ್ನು ಮರಕ್ಕೆ ಕಟ್ಟಿ ಆತನ ಕಣ್ಣೆದುರೇ ತನ್ನ ಗೆಳತಿಯನ್ನು ಕುಡುಕರ ಗ್ಯಾಂಗ್​ವೊಂದು ಅತ್ಯಾಚಾರ ಮಾಡಿರುವ ಘಟನೆ ಇಲ್ಲಿನ ಪಲ್ಲಿಪಾಲೆಂ ಬೀಚ್​ನಲ್ಲಿ ನಡೆದಿದೆ. ಇನ್ನು ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?: ಯುವತಿಯೊಬ್ಬಳು ತನ್ನ ಪ್ರೇಮಿ ಜೊತೆ ಬೀಚ್​ಗೆ ಹೋಗಿದ್ದಾಳೆ. ಇದನ್ನು ಗಮನಿಸಿದ ಕುಡುಕರ ಗ್ಯಾಂಗ್​ ಮೋಜು - ಮಸ್ತಿಯಲ್ಲಿ ತೊಡಗಿದ್ದ ಜೋಡಿ ಮೇಲೆ ದಾಳಿ ಮಾಡಿದೆ. ಬಳಿಕ ಯುವಕನನ್ನು ಮರಕ್ಕೆ ಕಟ್ಟಿ ಹಾಕಿದಲ್ಲದೇ ಆತನ ಕಣ್ಣೆದುರೇ ಗೆಳತಿಯನ್ನು ಅತ್ಯಾಚಾರ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ.

ಓದಿ:ಬೀದಿ ನಾಯಿಗೆ ಥಳಿಸಿ ಆ್ಯಸಿಡ್ ಹಾಕುವ ಯತ್ನ: ಐವರ ವಿರುದ್ಧ ಎಫ್‌ಐಆರ್‌ ದಾಖಲು

ಇದಾದ ಬಳಿಕ ಇಬ್ಬರು ತಮ್ಮ - ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಈ ವೇಳೆ, ಯುವತಿ ಸ್ಥಿತಿ ಬಗ್ಗೆ ಗಮನಿಸಿದ ಆಕೆಯ ಸಹೋದರ ಗಟ್ಟಿಯಾಗಿ ಕೇಳಿದ ಹಿನ್ನೆಲೆ ನಡೆದ ವಿಷಯವೆಲ್ಲವೂ ಆಕೆ ಹೇಳಿದ್ದಾಳೆ. ಕೂಡಲೇ ಸಂತ್ರಸ್ತೆ ಸಹೋದರ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯೊಬ್ಬನ್ನನ್ನು ಪತ್ತೆ ಹಚ್ಚಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details