ನಳಂದಾ (ಬಿಹಾರ):ಬಿಹಾರದ ನಳಂದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಮದುವೆ ಸಮಾರಂಭ ನೋಡುಗರನ್ನ ಬೆಚ್ಚಿ ಬೀಳಿಸಿದೆ. ಸಂಬಂಧಿಕರು ಹಾಗೂ ವರನ ಸಮ್ಮುಖದಲ್ಲೇ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿ(ವಧು) ಹಣೆಗೆ ಸಿಂಧೂರ ಹಚ್ಚಿದ್ದಾನೆ. ಇದನ್ನ ನೋಡಿರುವ ಜನರು ದಿಗ್ಬ್ರಮೆಗೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಯುವಕ - ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದರ ಬಗ್ಗೆ ಒಂದು ದಿನ ಯುವತಿ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ, ಹುಡುಗಿಯ ಮದುವೆ ನಿಶ್ಚಯ ಮಾಡಿದ್ದಾರೆ. ಮದುವೆ ಹಿಂದಿನ ದಿನ ಭಾಯ್ಫ್ರೆಂಡ್ಗೆ ಫೋನ್ ಮಾಡಿರುವ ಯುವತಿ 'ನಾಳೆ ನನ್ನ ಮದುವೆ... ನೀನು ಅಲ್ಲಿಗೆ ಬಂದು ನನ್ನ ಹಣೆಗೆ ಸಿಂಧೂರ ಹಚ್ಚು' ಎಂದು ಹೇಳಿದ್ದಾಳೆ.
ವಧುವಿನ ಬೇಡಿಕೆಯಂತೆ ಸಿಂಧೂರ ಹಂಚಿದ ಯುವಕ:ಇನ್ನೇನು ಕೆಲ ನಿಮಿಷಗಳಲ್ಲಿ ತಾಳಿ ಕಟ್ಟುವ ಸಮಾರಂಭ ನಡೆಯಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಭಾಯ್ಫ್ರೆಂಡ್ ಎಂಟ್ರಿ ನೀಡಿದ್ದಾನೆ. ಈ ವೇಳೆ ವಧುವಿನ ಬೇಡಿಕೆಯಂತೆ ಆಕೆಯ ಹಣೆಗೆ ಸಿಂಧೂರ ಹಚ್ಚಿದ್ದಾನೆ. ಇದನ್ನ ನೋಡಿರುವ ಯುವತಿ ಸಂಬಂಧಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆ ನಡೆದ ಬೆನ್ನಲ್ಲೇ ವರ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾನೆ.