ಕರ್ನಾಟಕ

karnataka

ETV Bharat / bharat

Girl friend  ಮೇಲೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ ಬಾಯ್​ಫ್ರೆಂಡ್ - ಗರ್ಲ್​ಫ್ರೆಂಡ್ ಮೇಲೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ ಬಾಯ್​ಫ್ರೆಂಡ್

ಸ್ನೇಹಿತರೊಂದಿಗೆ ಸೇರಿ ಯುವಕನೊಬ್ಬ ತನ್ನ ಗರ್ಲ್​ಫ್ರೆಂಡ್​ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್​ನಲ್ಲಿ ನಡೆದಿದೆ.

gang-rape
gang-rape

By

Published : Jun 24, 2021, 9:46 PM IST

ಮಹಾರಾಜಗಂಜ್​​(ಉತ್ತರ ಪ್ರದೇಶ): ಗರ್ಲ್​ಫ್ರೆಂಡ್ ಮೇಲೆ ಸ್ನೇಹಿತರೊಂದಿಗೆ ಸೇರಿ ಬಾಯ್​ಫ್ರೆಂಡ್​ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್​ಗಂಜ್​ನಲ್ಲಿ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ.

ರಾತ್ರಿ ವೇಳೆ ಗ್ರಾಮದ ಹೊರಗೆ ಬಂದು ತನ್ನನ್ನು ಭೇಟಿ ಮಾಡುವಂತೆ ಸ್ನೇಹಿತ ಫೋನ್ ಮಾಡಿದ್ದಾನೆ. ಆಕೆ ಬರುತ್ತಿದ್ದಂತೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾನೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು

ಇದನ್ನೂ ಓದಿರಿ: 1ಕೋಟಿ ರೂ. ಮೌಲ್ಯದ 80 iPhone​ ಸೀಜ್​ ಮಾಡಿದ ಪೊಲೀಸರು

ಉತ್ತರ ಪ್ರದೇಶದ ಕೊಲ್ಹುಯಿ ಪೊಲೀಸ್ ಠಾಣಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಯುವತಿ ತನ್ನ ಪ್ರೇಮಿ ಭೇಟಿಯಾಗುವ ಉದ್ದೇಶದಿಂದ ಹೊರ ಬರುತ್ತಿದ್ದಂತೆ ಈ ಕೃತ್ಯವೆಸಗಿದ್ದಾರೆ. ಆಕೆ ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಬಿದ್ದಿದ್ದಾಳೆ.

ಹುಡುಗಿಯ ಕುಟುಂಬಸ್ಥರು ಶೋಧಕಾರ್ಯ ನಡೆಸುತ್ತಿದ್ದಂತೆ ಆಕೆಯ ಉರ ಹೊರಗೆ ಸಿಕ್ಕಿದ್ದಾಳೆ. ಈ ವೇಳೆ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಮಾಹಿತಿ ನೀಡಿದ್ದಾಳೆ. ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳ ಬಂಧನಕ್ಕಾಗಿ ಎರಡು ತಂಡ ರಚನೆ ಮಾಡಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್​ ಗುಪ್ತಾ, ವ್ಯಕ್ತಿ ಹಾಗೂ ಆತನ ಸ್ನೇಹಿತರು ಸೇರಿ ದುಷ್ಕೃತ್ಯವೆಸಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಅವರ ಬಂಧನ ಮಾಡಲಾಗುವುದು ಎಂದಿದ್ದಾರೆ.

ABOUT THE AUTHOR

...view details