ನವ ದೆಹಲಿ:ಬೈಕ್ನಲ್ಲಿ ಬಂದ ಇಬ್ಬರು ಯುವಕರು ಬಾಲಕಿಯ (17 ವರ್ಷ) ಮೇಲೆ ಆ್ಯಸಿಡ್ ಎರಚಿದ ಘಟನೆ ದೆಹಲಿಯ ದ್ವಾರಕ ಜಿಲ್ಲೆಯ ಉತ್ತಮ್ನಗರದಲ್ಲಿ ಇಂದು ಬೆಳಗ್ಗೆ 7.30 ರ ಸುಮಾರಿಗೆ ನಡೆದಿದೆ. ಸಂತ್ರಸ್ತೆ ತನ್ನ ತಂಗಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ದುಷ್ಕೃತ್ಯ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಎಂ ಹರ್ಷವರ್ಧನ್ ತಿಳಿಸಿದರು.
ದೆಹಲಿಯಲ್ಲಿ ಶಾಲಾ ಬಾಲಕಿ ಮೇಲೆ ಆ್ಯಸಿಡ್ ದಾಳಿ: ಓರ್ವನ ಬಂಧನ - ಆ್ಯಸಿಡ್
ದೆಹಲಿಯ ದ್ವಾರಕ ಜಿಲ್ಲೆಯ ಉತ್ತಮ್ನಗರದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಬಾಲಕಿಯ ಮೈಮೇಲೆ ಆ್ಯಸಿಡ್ ಎರಚಿದ್ದಾರೆ.
ಅಪ್ರಾಪ್ತೆ ಮೇಲೆ ಆ್ಯಸಿಡ್ ರೀತಿ ವಸ್ತುವಿನಿಂದ ದಾಳಿ
ಇದನ್ನೂಓದಿ:ಮಹಿಳೆ, ಹಾಲಿ ಪ್ರಿಯಕರನ ಮೇಲೆ ಆ್ಯಸಿಡ್ ದಾಳಿ: ಪತಿ, ಮಾಜಿ ಪ್ರಿಯಕರನಿಂದ ಕೃತ್ಯ
ಬಾಲಕಿಯ ಎರಡೂ ಕಣ್ಣುಗಳಿಗೆ ಆ್ಯಸಿಡ್ ಬಿದ್ದಿದೆ. ಇಬ್ಬರ ಹೆಸರನ್ನು ಆಕೆ ಹೇಳಿದ್ದಾಳೆ. ಅವರಲ್ಲಿ ಓರ್ವ ಪೊಲೀಸರ ವಶದಲ್ಲಿದ್ದಾನೆ. ಪ್ರಾಥಮಿಕ ವರದಿಯ ಪ್ರಕಾರ, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ದೊರೆತಿದೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
Last Updated : Dec 14, 2022, 5:00 PM IST