ಹೈದರಾಬಾದ್:ಜುಬಿಲಿ ಹಿಲ್ಸ್ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ನಂತರ ನಗರದಲ್ಲಿ ದಿನದಿಂದ ದಿನಕ್ಕೆ ಇಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಆದರೆ, ಇಂತಹ ಅಪರಾಧಗಳು ತಡವಾಗಿ ಹೊರಬರುತ್ತಿರುವುದು ಗಮನಾರ್ಹ. ಇತ್ತೀಚೆಗಷ್ಟೇ ಇಂತಹದ್ದೊಂದು ಘಟನೆ ಮೀರ್ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನಲ್ಲಕುಂಟದ ನಿವಾಸಿ ಅಮಿತ್ ವರ್ಧನ್ (19) 15 ವರ್ಷದ ವಿದ್ಯಾರ್ಥಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ.
ಬಾಲಕಿ ಇಲ್ಲಿನ ಕಾಲೇಜೊಂದರಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದಾಳೆ. ಕಳೆದ ವರ್ಷ ಇದೇ ಕಾಲೇಜಿನ ಸಹಪಾಠಿ ಅಮಿತ್ ವರ್ದನ್ ಎಂಬಾತ ಬಾಲಕಿಗೆ ಪರಿಚಯವಾಗಿದ್ದ. ಹುಡುಗಿಯ ನಂಬರ್ ಪಡೆದು ಆಗಾಗ ಕರೆ ಮಾಡಿ ತನ್ನ ಪ್ರಪೋಸಲ್ ಸ್ವೀಕರಿಸುವಂತೆ ಹೇಳುತ್ತಿದ್ದ. ಆತನ ಮಾತನ್ನು ನಂಬಿದ ಹುಡುಗಿ 2022ರ ಜನವರಿಯಲ್ಲಿ ವರ್ಧನ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಆ ದಿನದಿಂದ ಫೋನ್ನಲ್ಲಿ ಇಬ್ಬರ ಪ್ರೀತಿ ಮಾತುಗಳು ಜೋರಾಗಿಯೇ ನಡೆದವು.
ಓದಿ:ಹೈದರಾಬಾದ್ನಲ್ಲಿ ಮತ್ತೊಂದು ನೀಚ ಕೃತ್ಯ: 9ರ ಬಾಲೆ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ