ಕರೀಂನಗರ(ತೆಲಂಗಾಣ):ಸೆಲ್ಫಿ ಗೀಳಿನಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಅಂತಹದ್ದೇ ಮತ್ತೊಂದು ದುರ್ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿನ ಮೇಲೆ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ವೇಳೆ ಹೈಟೆನ್ಷನ್ ವಿದ್ಯುತ್ ಸ್ಪರ್ಶಿಸಿ ಬಾಲಕನೋರ್ವ ಸಾವಿಗೀಡಾಗಿದ್ದಾನೆ.
ತೆಲಂಗಾಣದ ಕರೀಂನಗರದಲ್ಲಿ ಘಟನೆ ನಡೆದಿದೆ. ಇಲ್ಲಿನ ತಿಗಳಗುಟ್ಟಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಕಾಚಿಗುಡ-ಪೆದ್ದಪಲ್ಲಿ ಪ್ಯಾಸೆಂಜರ್ ರೈಲು ಪ್ಲಾಟ್ಫಾರ್ಮ್ನಲ್ಲಿ ನಿಂತಿತ್ತು. ಕರೀಂನಗರದ ಸಾಯಿನಗರ ನಿವಾಸಿ ಮೊಹಮ್ಮದ್ ಸಲ್ಮಾನ್ ಖಾನ್(16) ಎಂಬಾತ ಶಾಲಾ ತರಗತಿ ಮುಗಿದ ನಂತರ ನೇರವಾಗಿ ತನ್ನ ಸ್ನೇಹಿತರೊಂದಿಗೆ ರೈಲ್ವೇ ಸ್ಟೇಷನ್ಗೆ ತೆರಳಿದ್ದಾನೆ.