ಮೇದಕ್(ತೆಲಂಗಾಣ): ಮಣಿಕಂಠ ಸಾಯಿ ಎಂಬ 9 ವರ್ಷದ ಮಾನಸಿಕ ಅಸ್ವಸ್ಥ ಬಾಲಕನನ್ನು ಮಂಗಗಳು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ದುರ್ಘಟನೆ ಮೇದಕ್ ಜಿಲ್ಲೆಯ ನರಸಾಪುರದಲ್ಲಿ ನಡೆದಿದೆ.
ಶಿವಾಲಯ ನಗರ ನಿವಾಸಿ ಕಸ್ತೂರಿ ಯಶೋದಾ ಎಂಬುವವರು ಕಟ್ಟಡ ಕಾರ್ಮಿಕರಾಗಿ ದುಡಿದು ಕುಟುಂಬವನ್ನು ಪೋಷಿಸುತ್ತಿದ್ದಾರೆ. ಇವರ ಮಗ(ಮಣಿಕಂಠ ಸಾಯಿ) ಮಾನಸಿಕ ಅಸ್ವಸ್ಥನಾಗಿದ್ದ. ಹಾಗಾಗಿ ತಾಯಿ ಕೆಲಸಕ್ಕೆ ಹೋದಾಗಲೆಲ್ಲ ಆತನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಶನಿವಾರವೂ ಮನೆ ಕಟ್ಟಲು ನರಸಾಪುರಕ್ಕೆ ತೆರಳಿದ್ದಾರೆ.