ಅಲಿಗಢ: ಇಂದಿನ ವಿಜ್ಞಾನ ಕಾಲದಲ್ಲೂ ಮೂಢನಂಬಿಕೆಗಳನ್ನು ಜನರು ನಂಬುತ್ತಾರೆ. ಇದರ ನೆರಳು ನಮ್ಮಿಂದ ಇನ್ನೂ ದೂರವಾಗಿಲ್ಲ. ಉತ್ತರ ಪ್ರದೇಶದ ಅಲಿಗಢದಲ್ಲಿ ಬಾಲಕನೊಬ್ಬ ಹಾವು ಕಚ್ಚಿ ಮೃತಪಟ್ಟಿದ್ದು, ಶವ ಸಂಸ್ಕಾರ ಮಾಡಲಾಗಿತ್ತು. ಬಳಿಕ ಮಾಂತ್ರಿಕನ ಮಾತು ಕೇಳಿ ಹೂತಿದ್ದ ಶವವನ್ನು ಹೊರತೆಗೆದು ಬದುಕಿಸುವ ವಿಫಲ ಯತ್ನ ನಡೆದಿದೆ.
ಅಲಿಗಢ್‌ನ ತಹಸಿಲ್ ಖೈರ್ ಪ್ರದೇಶದ ಶಿವಲಾ ಖುರ್ದ್ ಗ್ರಾಮದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ವಿಷಪೂರಿತ ನಾಗರಹಾವು ಬಾಲಕನನ್ನು ಕಚ್ಚಿದ್ದು, ಇದರಿಂದಾಗಿ ಆತ ಮೃತಪಟ್ಟಿದ್ದ. ಬಳಿಕ ಬಾಲಕನ ಶವವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.
ಈ ವಿಷಯ ತಿಳಿದ ಹಾವುಗಳ ವಿಷವನ್ನು ಹೊರತೆಗೆಯುವ ಬಯ್ಯಗೀರ್ ಎಂಬಾತ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ, ಬಾಲಕನನ್ನು ಬದುಕಿಸುವೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಜನರು ಬಾಲಕನನ್ನು ಹೂತಿದ್ದ ಸಮಾಧಿಯಿಂದ ಹೊರ ತೆಗೆದಿದ್ದಾರೆ.