ಕರ್ನಾಟಕ

karnataka

ETV Bharat / bharat

ಮೊಬೈಲ್​ನಲ್ಲಿ ಗೇಮ್​ ಆಡಬೇಡ ಎಂದಿದ್ದಕ್ಕೆ ಕೋಪಗೊಂಡ ಬಾಲಕ ಆತ್ಮಹತ್ಯೆ - ಬಾಲಕ ಆತ್ಮಹತ್ಯೆ ಪ್ರಕರಣ

ಮೊಬೈಲ್​ನಲ್ಲಿ ಗೇಮ್​ ಆಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಕೋಪಗೊಂಡ 13 ವರ್ಷದ ಬಾಲಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

boy-commits-suicide-after-parents-stop-him-from-playing-mobile-games
ಮೊಬೈಲ್​ನಲ್ಲಿ ಗೇಮ್​ ಆಡಬೇಡ ಎಂದಿದ್ದಕ್ಕೆ ಕೋಪಗೊಂಡ ಬಾಲಕ ಆತ್ಮಹತ್ಯೆ

By

Published : Oct 14, 2021, 4:05 AM IST

ಭುವನೇಶ್ವರ:ಮೊಬೈಲ್​ನಲ್ಲಿ ಗೇಮ್​ ಆಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಕೋಪಗೊಂಡ 13 ವರ್ಷದ ಬಾಲಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಬಾಲಕ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೊಬೈಲ್ ಫೋನ್‌ ಮೂಲಕ ಆನ್‌ಲೈನ್ ತರಗತಿಗೆ ಹಾಜರಾಗುತ್ತಿದ್ದ. ಆದರೆ ಬಾಲಕ ಮೊಬೈಲ್​ನಲ್ಲಿ ಸದಾ ಗೇಮ್​ ಆಡುವುದರಲ್ಲಿ ನಿರತನಾಗಿರುತ್ತಿದ್ದ. ಆಟ ಆಡದಂತೆ ಅನೇಕ ಸಲ ಪೋಷಕರು ಆತನಿಗೆ ತಿಳಿಹೇಳಿದ್ದರು.

ಆದರೂ ಕೂಡ ಗೇಮ್​ ಆಡುವುದನ್ನು ಮುಂದುವರೆಸಿದ್ದು, ಅದನ್ನು ಕಂಡ ಪೋಷಕರು ಮೊಬೈಲ್​ ಕಿತ್ತುಕೊಂಡಿದ್ದರು. ಇದರಿಂದ ಕೋಪಗೊಂಡ ಬಾಲಕ ಮನೆಯಲ್ಲಿನ ಕೋಣೆಯೊಳಗೆ ಹೋಗಿ ಬಾಗಿಲಿನ ಬೀಗ ಹಾಕಿಕೊಂಡಿದ್ದಾನೆ. ನಂತರ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನೇಣು ಹಾಕಿಕೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಕೇವಲ 1,000 ರೂಪಾಯಿಗೆ ಸ್ನೇಹಿತನ ಕೊಲೆ: ಮರ್ಡರ್ ಮಿಸ್ಟರಿ ಬಿಚ್ಚಿಟ್ಟ ಮರಣೋತ್ತರ ಪರೀಕ್ಷೆ ವರದಿ

ABOUT THE AUTHOR

...view details