ಅಂಬಾಲಾ(ಪಂಜಾಬ್) :ಕೂಲ್ಡ್ರಿಂಕ್ಸ್ ಬಾಟಲ್ನ ಮುಚ್ಚಳ ತೆಗೆಯಲು ಹೋದಾಗ ಅದು ಗಂಟಲಲ್ಲಿ ಸಿಲುಕಿ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟ ಘಟನೆ ಪಂಜಾಬ್ನ ಅಂಬಾಲಾದಲ್ಲಿ ನಡೆದಿದೆ.
ಅಂಬಾಲಾ ನಿವಾಸಿಯಾದ 11ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಯಶ್ ಮೃತಪಟ್ಟ ಬಾಲಕ. ನಿನ್ನೆ (ಶುಕ್ರವಾರ) ಅಂಗಡಿಯಿಂದ ಖರೀದಿಸಿ ತಂದಿದ್ದ ಕೂಲ್ ಡ್ರಿಂಕ್ಸ್ ಬಾಟಲಿ ಮುಚ್ಚಳವನ್ನು ತೆರೆಯಲೆಂದು ಬಾಲಕ ಯಶ್ ಅದನ್ನು ಹಲ್ಲಿನಿಂದ ಕಚ್ಚಿ ತೆಗೆದಿದ್ದಾನೆ. ಈ ವೇಳೆ ಅದು ಅಚಾನಕ್ಕಾಗಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ.