ಫರೀದ್‌ಕೋಟ್ (ಪಂಜಾಬ್) :ಬಾಬಾ ಫರೀದ್ ವಿಶ್ವವಿದ್ಯಾಲಯದ ಅರೆವೈದ್ಯಕೀಯ ಸಿಬ್ಬಂದಿ ನೇಮಕಾತಿ ಲಿಖಿತ ಪರೀಕ್ಷೆ ವೇಳೆ ಬಾಲಕಿ ವೇಷ ತೊಟ್ಟ ಬಾಲಕನೊಬ್ಬ, ಕೋಟಕಪುರದ ಡಿಎವಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಪೇಪರ್ ಸಲ್ಲಿಸಲು ತೆರಳಿ ಪರೀಕ್ಷೆಯ ನಿರ್ವಾಹಕರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರವೇಶದ ವೇಳೆ ಬಯೋಮೆಟ್ರಿಕ್ ಮೇಲೆ ಬೆರಳು ಇಟ್ಟಾಗ ಪ್ರಿಂಟ್ ಮ್ಯಾಚ್ ಆಗದ ಕಾರಣ ಅವರ ಮೇಲೆ ಅನುಮಾನ ಬಂದಿದೆ. ಈ ಅನುಮಾನದ ಆಧಾರದ ಮೇಲೆ ಬಾಲಕನನ್ನು ತಪಾಸಣೆಗೆ ಒಳಪಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಪತ್ತೆ: ಅನುಮಾನಗೊಂಡು ನಿರ್ವಾಹಕರು ಪರಿಶೀಲಿಸಿದಾಗ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ ಅಸಲಿ ಅಲ್ಲ ಎಂಬ ಸತ್ಯ ಹೊರ ಬಿದ್ದಿದೆ. ಹೆಚ್ಚಿನ ತನಿಖೆ ವೇಳೆ ಬಾಲಕ ಬಾಲಕಿಯ ವೇಷ ಧರಿಸಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಆರೋಪಿ ಬಾಲಕನನ್ನು ಕೂಡಲೇ ಪೊಲೀಸರಿಗೆ ಒಪ್ಪಿಸಲಾಗಿದೆ. ಬಾಲಕ ನಕಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಕೂಡ ತಯಾರಿಸಿದ್ದ. ಅದನ್ನು ಈಗಾಗಲೇ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಾಲಕಿಯ ವೇಷ : ವಿಚಾರಣೆ ವೇಳೆ ಫಜಿಲ್ಕಾ ಜಿಲ್ಲೆಯ ನಿವಾಸಿಯಾಗಿರುವ ಬಾಲಕ ಅಂಗ್ರೇಜ್ ಸಿಂಗ್ ಅದೇ ಜಿಲ್ಲೆಯ ಧಾನಿ ಗ್ರಾಮದ ಬಾಲಕಿ ಪರಮ್‌ಜಿತ್ ಕೌರ್ ಎಂಬುವವರ ಜಾಗದಲ್ಲಿ ಪೇಪರ್ ನೀಡಿರುವುದು ಬೆಳಕಿಗೆ ಬಂದಿದೆ. ಪರೀಕ್ಷೆಯ ನಂತರ ಪೇಪರ್ ನೀಡಲು, ಬಾಲಕ ಹೆಣ್ಣಿನ ಬಟ್ಟೆ, ನಕಲಿ ಕೂದಲು ಮತ್ತು ಡಾಟ್ ಕ್ಯಾಪ್ ಅನ್ನು ಧರಿಸಿದ್ದ. ಇಷ್ಟೆಲ್ಲ ತಯಾರಿ ಮಾಡಿಕೊಂಡಿದ್ದರೂ ಪೇಪರ್ ಕೊಡುವ ಬಾಲಕನ ಪ್ರಯತ್ನ ಸಫಲವಾಗಲಿಲ್ಲ.