ಕರ್ನಾಟಕ

karnataka

ETV Bharat / bharat

ಆಟವಾಡುತ್ತಿದ್ದಾಗ ಶಾಲು ಕುತ್ತಿಗೆಗೆ ಸುತ್ತಿಕೊಂಡು ಬಾಲಕ ಸಾವು - ಗುರುಗ್ರಾಮದ ಶಾಂತಿ ನಗರದಲ್ಲಿ ಘಟನೆ

ಶಾಲನ್ನೇ ಹಗ್ಗದ ರೀತಿ ಬಳಸಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕಿಸಿಕೊಳ್ಳಲಾಗಲಿಲ್ಲ ಎನ್ನಲಾಗಿದೆ..

Boy accidentally hangs self in Gurugram
ಆಟವಾಡುತ್ತಿದ್ದಾಗ ಶಾಲು ಕುತ್ತಿಗೆಗೆ ಸುತ್ತಿಕೊಂಡು ಬಾಲಕ ಸಾವು

By

Published : Feb 15, 2021, 4:35 PM IST

ಗುರುಗ್ರಾಮ್ (ಹರಿಯಾಣ) :10 ವರ್ಷದ ಬಾಲಕ ತನ್ನ ಮನೆಯ ಕಿಟಕಿಗೆ ಕಟ್ಟಿದ ಶಾಲುವಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಗುರುಗ್ರಾಮದ ಶಾಂತಿ ನಗರ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ವಿಶಾಲ್ ಎಂಬಾತ ಮೃತ ಬಾಲಕ. ಆತ ತನ್ನ ಕೋಣೆಯಲ್ಲಿನ ಕಿಟಕಿಯ ಬಳಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಶಾಲು ಸಿಲುಕಿ ಉಸಿರಾಟ ಸಾಧ್ಯವಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:646 ರೂ. ಜಿಗಿದ ಬೆಳ್ಳಿ: ಬಂಗಾರದ ದರದಲ್ಲಿ ಅಲ್ಪ ಇಳಿಕೆ

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದಾರೆ. ಈ ಬಗ್ಗೆ ತರಕಾರಿ ವ್ಯಾಪಾರಿಯಾದ ವಿಶಾಲ್ ತಂದೆ ಪ್ರತಿಕ್ರಿಯೆ ನೀಡಿದ್ದು, ವಿಶಾಲ್ ತನ್ನ ಕೋಣೆಯ ಬಾಗಿಲನ್ನು ಮುಚ್ಚಿ ಆಟವಾಡುತ್ತಿದ್ದನು.

ಶಾಲನ್ನೇ ಹಗ್ಗದ ರೀತಿ ಬಳಸಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕಿಸಿಕೊಳ್ಳಲಾಗಲಿಲ್ಲ ಎನ್ನಲಾಗಿದೆ. ಶಿವಾಜಿನಗರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details