ಕರ್ನಾಟಕ

karnataka

ETV Bharat / bharat

ರೈತರ ಪರ ವಿಜೇಂದರ್ 'ಬಾಕ್ಸಿಂಗ್': ಖೇಲ್ ರತ್ನ ವಾಪಸ್​ 'ಪಂಚ್'! - ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆ

ದೆಹಲಿಯಲ್ಲಿ ಸುಮಾರು 11 ದಿನಗಳಿಂದ ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಬಾಕ್ಸರ್ ವಿಜೇಂದರ್ ಸಿಂಗ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

international boxer vijender singh
ಅಂತಾರಾಷ್ಟ್ರೀಯ ಬಾಕ್ಸರ್ ವಿಜೇಂದರ್ ಸಿಂಗ್

By

Published : Dec 6, 2020, 4:21 PM IST

Updated : Dec 6, 2020, 4:29 PM IST

ಸೋನಿಪತ್ (ಹರಿಯಾಣ):ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ, ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಬಾಕ್ಸರ್ ಹಾಗು ಕಾಂಗ್ರೆಸ್‌ ನಾಯಕ ವಿಜೇಂದರ್ ಸಿಂಗ್ ಬೆಂಬಲ ಸೂಚಿಸಿದ್ದಾರೆ.

ಹರಿಯಾಣ-ದೆಹಲಿ ನಡುವಿನ ಸಿಂಘು ಗಡಿಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕಾಯ್ದೆಗಳನ್ನು ಹಿಂಪಡೆಯದಿದ್ದರೆ, ತಮಗೆ ಸರ್ಕಾರ ನೀಡಿರುವ 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಓದಿ:ರೈತ ಆಂದೋಲನಕ್ಕೆ ಕಾರ್ಮಿಕರ ಬಲ: ಡಿ.8ರ ಭಾರತ್​ ಬಂದ್​ಗೆ ಕಾರ್ಮಿಕ ಒಕ್ಕೂಟದ ಸಾಥ್

ರೈತರ ಈ ರೀತಿಯ ಒಗ್ಗಟ್ಟು ಭವಿಷ್ಯದಲ್ಲೂ ಈ ರೀತಿಯಾಗಿಯೇ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ವಿಜೇಂದರ್, ದೇಶದ ಆಧಾರ ಸ್ಥಂಭವಾಗಿರುವ ರೈತರಿಗೆ ಸಂಪೂರ್ಣ ನನ್ನ ಸಂಪೂರ್ಣ ಬೆಂಬಲ ಎಂದಿದ್ದಾರೆ.

ವಿಜೇಂದರ್‌ ರಾಜಕೀಯ ಹಿನ್ನೆಲೆ:

ವಿಜೇಂದರ್ ಸಿಂಗ್ 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಕಾಂಗ್ರೆಸ್ ಪರವಾಗಿ ಹಲವಾರು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು.

ಸದ್ಯ ಹಲವಾರು ಮಂದಿ ರೈತರ ಪ್ರತಿಭಟನೆಗೆ ಬೆಂಬಲವಾಗಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು, ಬಾಕ್ಸಿಂಗ್​ನ ಮಾಜಿ ಕೋಚ್​ ಗುರುಭಕ್ಷ್​ ಸಿಂಗ್ ಸದು ತಮ್ಮ ದ್ರೋಣಾಚಾರ್ಯ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.

Last Updated : Dec 6, 2020, 4:29 PM IST

ABOUT THE AUTHOR

...view details