ಟೋಕಿಯೊ: ಭಾರತದ ಭರವಸೆಯ ಬಾಕ್ಸರ್ ಸತೀಶ್ ಕುಮಾರ್ (91 ಕೆಜಿ) ಬಾಕ್ಸಿಂಗ್ ವಿಭಾಗದಲ್ಲಿ ವಿಶ್ವದ ನಂಬರ್ 1 ಬಾಕ್ಸರ್ ಉಜ್ಬೇಕಿಸ್ತಾನದ ಬಖೋದಿರ್ ಜಲೋವ್ ವಿರುದ್ಧ ಸೋಲು ಅನುಭವಿಸಿದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ಅಭಿಯಾನ ಕೊನೆಗೊಳಿಸಿದರು.
Tokyo Olympics: ಕ್ವಾರ್ಟರ್ ಫೈನಲ್ನಲ್ಲಿ ಬಾಕ್ಸರ್ ಸತೀಶ್ ಕುಮಾರ್‌ಗೆ ವೀರೋಚಿತ ಸೋಲು - mens Super Heavy weight boxing quarterfinals
ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಸೂಪರ್ ಹೆವಿವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಸತೀಶ್ ಕುಮಾರ್ ನಿರಾಶೆ ಅನುಭವಿಸಿದರು.

Boxer Satish Kumar
ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಪಾಯಿಂಟುಗಳ ಅಂತರದಿಂದ ಸೋಲಿಸುವ ಮೂಲಕ ಸತೀಶ್ ಕುಮಾರ್ ಅವರು 91 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದ್ರೆ ಕ್ವಾರ್ಟರ್ ಫೈನಲ್ನಲ್ಲಿ ಉಜ್ಬೇಕಿಸ್ತಾನದ ಬಖೋದಿರ್ ಜಲೋವ್ ಅವರನ್ನು ಮಣಿಸುವಲ್ಲಿ ಯಶ ಸಾಧಿಸಲಿಲ್ಲ.
2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಜತ ಪದಕ ಗೆದ್ದಿದ್ದ ಸತೀಶ್ ಕುಮಾರ್ ಮೇಲೆ ಕ್ರೀಡಾಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿತ್ತು.