ಕರ್ನಾಟಕ

karnataka

ETV Bharat / bharat

ಕ್ಲಬ್​ಗೆ ಬಂದ ಮಹಿಳೆಯ ಜೊತೆ ಬೌನ್ಸರ್​ ಅಸಭ್ಯ ವರ್ತನೆ ಆರೋಪ.. ದೌರ್ಜನ್ಯ ಖಂಡಿಸಿದ ಸ್ನೇಹಿತರಿಗೆ ಬಿದ್ವು ಗೂಸಾ! - ಉದ್ಯೋಗ್ ವಿಹಾರ್ ಪೊಲೀಸ್ ಠಾಣೆ

ಇನ್ನು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದು, ಆರು ಬೌನ್ಸರ್‌ಗಳು ಸೇರಿದಂತೆ ಏಳು ಮಂದಿ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಕಲಾ ರಾಮಚಂದ್ರನ್ ತಿಳಿಸಿದ್ದಾರೆ. ಬಂಧಿತರನ್ನು ಸೋನು, ಮಂದೀಪ್, ಸುಮಿತ್, ನಿತಿನ್, ರಾಮ್ ಸಿಂಗ್, ರಾಕೇಶ್ ಮತ್ತು ಕ್ಲಬ್ ಮ್ಯಾನೇಜರ್ ಲೋಕೇಶ್ ಎಂದು ಗುರುತಿಸಲಾಗಿದೆ.

Bouncers beating youth in Haryana  Woman molesting  Bouncers beating youth in Gurugram  Haryana crime news  ಕ್ಲಬ್​ಗೆ ಬಂದ ಮಹಿಳೆಯ ಜೊತೆ ಬೌನ್ಸರ್​ ಅಸಭ್ಯ ವರ್ತನೆ  ದೌರ್ಜನ್ಯ ಖಂಡಿಸಿದ ಸ್ನೇಹಿತರಿಗೆ ಬಿದ್ವು ಗೂಸಾ  ಹರಿಯಾಣದ ಗುರುಗ್ರಾಮದಲ್ಲಿ ಬೌನ್ಸರ್‌ಗಳ ಗೂಂಡಾಗಿರಿ  ಕ್ಲಬ್​ಗೆ ಹೋದ ಮಹಿಳೆ ಜೊತೆ ಬೌನ್ಸರ್ ಅಸಭ್ಯ  ಬೌನ್ಸರ್ ಜತೆ ವಾಗ್ವಾದ  ಉದ್ಯೋಗ್ ವಿಹಾರ್ ಪೊಲೀಸ್ ಠಾಣೆ
ಮಹಿಳೆ ಸ್ನೇಹಿತರನ್ನು ಥಳಿಸುತ್ತಿರುವ ಬೌನ್ಸರ್​ಗಳ ವಿಡಿಯೋ

By

Published : Aug 11, 2022, 8:09 AM IST

Updated : Aug 11, 2022, 10:57 AM IST

ಗುರುಗ್ರಾಮ(ಹರಿಯಾಣ): ಗುರುಗ್ರಾಮದಲ್ಲಿ ಮತ್ತೊಮ್ಮೆ ಬೌನ್ಸರ್‌ಗಳ ಗೂಂಡಾಗಿರಿ ಕಾಣಿಸಿಕೊಂಡಿದೆ. ಕ್ಲಬ್ ಪ್ರವೇಶಿಸುವ ವೇಳೆ ಮಹಿಳೆ ಜೊತೆ ಬೌನ್ಸರ್​ ಅಸಭ್ಯವಾಗಿ ಪ್ರವರ್ತಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಖಂಡಿಸಿದ ಮಹಿಳೆಯೊಂದಿಗೆ ಬಂದಿದ್ದ ಆಕೆಯ ಸ್ನೇಹಿತರು ಬೌನ್ಸರ್ ಜತೆ ವಾಗ್ವಾದ ನಡೆಸಿದ್ದಾರೆ. ನಂತರ ಮಹಿಳೆಯ ಸ್ನೇಹಿತರನ್ನು ಬೌನ್ಸರ್‌ಗಳು ಅಮಾನುಷವಾಗಿ ಥಳಿಸಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಕೂಡ ಈಗ ವೈರಲ್​ ಆಗಿದೆ.

ಮಹಿಳೆ ಸ್ನೇಹಿತರನ್ನು ಥಳಿಸುತ್ತಿರುವ ಬೌನ್ಸರ್​ಗಳ ವಿಡಿಯೋ

ವಿಡಿಯೋದಲ್ಲಿ 8-10 ಬೌನ್ಸರ್‌ಗಳು ಯುವಕರನ್ನು ಥಳಿಸುತ್ತಿರುವುದು ಕಂಡುಬಂದಿದೆ. ಹಿಂದಿನಿಂದ ಮಹಿಳೆಯರು ಕೂಗುವ ಸದ್ದು ಕೇಳಿ ಬರುತ್ತಿದೆ. ಮಹಿಳೆಯ ಸ್ನೇಹಿತರ ವಾಚ್ ಮತ್ತು ಜೇಬಿನಲ್ಲಿದ್ದ 12 ಸಾವಿರ ರೂಪಾಯಿಯನ್ನೂ ಬೌನ್ಸರ್‌ಗಳು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಪೂರ್ಣ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಉದ್ಯೋಗ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂರು ದಿನ ಕಳೆದರೂ ಈ ಪ್ರಕರಣದಲ್ಲಿ ಯಾರ ಬಂಧನವೂ ಆಗಿಲ್ಲ. ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಭಾನುವಾರ ರಾತ್ರಿ ನಾವು ನಾಲ್ವರು ಸ್ನೇಹಿತರೊಂದಿಗೆ ಉದ್ಯೋಗ ವಿಹಾರ್‌ನಲ್ಲಿರುವ ಕಾಸಾ - ಡಾನ್ಸಾ ಕ್ಲಬ್​ಗೆ ತೆರಳಿದ್ದೆವು.

ಈ ವೇಳೆ, ಒಬ್ಬ ಮಹಿಳಾ ಸ್ನೇಹಿತೆ ಕೂಡ ಜೊತೆಗಿದ್ದಳು. ನಾವೆಲ್ಲರೂ ಕ್ಲಬ್ ಪ್ರವೇಶಿಸುತ್ತಿದ್ದಾಗ ಅಲ್ಲಿದ್ದ ಬೌನ್ಸರ್ ಒಬ್ಬ ನನ್ನ ಸ್ನೇಹಿತೆಯನ್ನು ಅನುಚಿತವಾಗಿ ಮುಟ್ಟಿದ್ದಾನೆ ಎಂದು ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಬೌನ್ಸರ್​ ವರ್ತನೆಯನ್ನು ಬಗ್ಗೆ ನಾವು ಧ್ವನಿಯೆತ್ತಿದಾಗ ನಮ್ಮ ಮೇಲೆ ಆತ ನಿಂದಿಸಲು ಆರಂಭಿಸಿದ. ಆಗ ಕ್ಲಬ್‌ನಲ್ಲಿದ್ದ ಇತರ ಬೌನ್ಸರ್‌ಗಳೂ ಬಂದು ಇಬ್ಬರು ಮ್ಯಾನೇಜರ್‌ಗಳನ್ನು ಕರೆದರು. ಬಳಿಕ ವಾಗ್ವಾದ ನಡೆಯಿತು. ಎಲ್ಲ ಬೌನ್ಸರ್‌ಗಳು ಸೇರಿ ನಮ್ಮವರೆಲ್ಲರನ್ನೂ ತೀವ್ರವಾಗಿ ಥಳಿಸಿದರು ಎಂದು ಸಂತ್ರಸ್ತ ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅನುಚಿತ ವರ್ತನೆಗೆ ನಾವೆಲ್ಲರೂ ತಿರುಗಿ ಬಿದ್ದಾಗ ಎಂಟು ಬೌನ್ಸರ್‌ಗಳು ನಮ್ಮನ್ನು ರಸ್ತೆಗೆ ಕರೆದೊಯ್ದು ಗೇಟ್‌ನಿಂದ ಹೊರಕ್ಕೆ ತಳ್ಳಿ ಥಳಿಸಿದ್ದಾರೆ. ದಾಳಿಯಲ್ಲಿ ನಾವು ಗಾಯಗೊಂಡಿದ್ದೇವೆ. ಕ್ಲಬ್‌ಗೆ ಮತ್ತೊಮ್ಮೆ ಭೇಟಿ ನೀಡಿದರೆ ನಮ್ಮನ್ನು ಕೊಲ್ಲುವುದಾಗಿ ಮ್ಯಾನೇಜರ್​ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಇನ್ನು ಯುವಕರನ್ನು ಥಳಿಸುತ್ತಿರುವ ದೃಶ್ಯವನ್ನು ದಾರಿಹೋಕರೊಬ್ಬರು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದು, ಆರು ಬೌನ್ಸರ್‌ಗಳು ಸೇರಿದಂತೆ ಏಳು ಮಂದಿಯನ್ನು ಬುಧವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕಲಾ ರಾಮಚಂದ್ರನ್ ತಿಳಿಸಿದ್ದಾರೆ. ಬಂಧಿತರನ್ನು ಸೋನು, ಮಂದೀಪ್, ಸುಮಿತ್, ನಿತಿನ್, ರಾಮ್ ಸಿಂಗ್, ರಾಕೇಶ್ ಮತ್ತು ಕ್ಲಬ್ ಮ್ಯಾನೇಜರ್ ಲೋಕೇಶ್ ಎಂದು ಗುರುತಿಸಲಾಗಿದೆ.

ದೂರಿನ ನಂತರ, 10 ಜನರ ವಿರುದ್ಧ ಸೆಕ್ಷನ್ 147 (ಗಲಭೆ), 149 (ಕಾನೂನುಬಾಹಿರ ಸಭೆ), 323 (ಗಾಯ ಉಂಟುಮಾಡುವುದು), 354-ಎ (ದೌರ್ಬಲ್ಯ), 379-ಎ (ಕಳ್ಳತನ), 506 (ಅಪರಾಧ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ಕುರಿತು ಕ್ಲಬ್ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಓದಿ:ವೃದ್ಧನ ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಿ ಹತ್ಯೆ: ಭೀಕರ ವಿಡಿಯೋ

Last Updated : Aug 11, 2022, 10:57 AM IST

ABOUT THE AUTHOR

...view details