ಮುಜಾಫರ್‌ಪುರ (ಬಿಹಾರ): ಇಲ್ಲಿನ ರೆಡ್ ಲೈಟ್ ಏರಿಯಾದಲ್ಲಿ ಹುಟ್ಟಿ ಬೆಳೆದ ನಸೀಮಾ ಖಾತೂನ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಸಲಹಾ ಗುಂಪಿನ ಸದಸ್ಯೆಯಾಗಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ (NHRC) ಸಲಹಾ ಸಮಿತಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ಖಾತೂನ್ ಸ್ಥಾನ ಪಡೆದುಕೊಂಡಿದ್ದಾರೆ.
ಸಂತಸ ವ್ಯಕ್ತಪಡಿಸಿರುವ ಖಾತೂನ್:ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಆಯೋಗವು ರಾಷ್ಟ್ರೀಯ ಮಟ್ಟದ ಸಮಿತಿ ರಚಿಸಿದೆ. ಇದರಲ್ಲಿ ನನಗೂ ಸ್ಥಾನ ನೀಡಲಾಗಿದೆ. ಈಗ ದೇಶದ ಅತಿ ದೊಡ್ಡ ನ್ಯಾಯಾಂಗ ವೇದಿಕೆಯಲ್ಲಿ ನಿಮ್ಮ ಧ್ವನಿ ಬಲವಾಗಿ ಕೇಳಿ ಬರಲಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಿಮ್ಮೆಲ್ಲರ ಪ್ರಯತ್ನದಿಂದ ನಾನು ನನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ ಎಂದು ನಸೀಮಾ ಖಾತೂನ್ ಹೇಳಿದ್ದಾರೆ.
ನನ್ನ ಹಿರಿಯರು ಮತ್ತು ಸಮುದಾಯದ ಆಶೀರ್ವಾದದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ತೀರಾ ಕೆಳಹಂತದಲ್ಲಿರುವ ಜನರ ಹಕ್ಕುಗಳಿಗಾಗಿ ಹೋರಾಡಲು ನಾನು ಈ ಮಾನ್ಯತೆ ಮತ್ತು ಜವಾಬ್ದಾರಿಯನ್ನು ಪಡೆದುಕೊಂಡಿದ್ದೇನೆ ಎಂದು ಖಾತೂನ್ ಸಂತಸ ವ್ಯಕ್ತಪಡಿಸಿದ್ದಾರೆ.
ಯಾರಿವರು ನಸೀಮಾ ಖಾತೂನ್:ನಸೀಮಾ ಖಾತೂನ್ ಬಿಹಾರದ ಮುಜಾಫರ್‌ಪುರದ ಚತುರ್ಭುಜ್ ಸ್ಥಾನಾದಲ್ಲಿ ಜನಿಸಿದರು. ಇವರ ತಂದೆಯನ್ನು ಬಾಲ್ಯದಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರು ದತ್ತು ಪಡೆದಿದ್ದರು. ಈ ಅಜ್ಜಿಯೇ ಖಾತೂನ್ ಅವರ ಆರೈಕೆ ಮಾಡಿದರು. 1995 ರಲ್ಲಿ ಐಎಎಸ್ ಅಧಿಕಾರಿ ರಾಜಬಾಲಾ ವರ್ಮಾ ಅವರು ಲೈಂಗಿಕ ಕಾರ್ಯಕರ್ತರು ಮತ್ತು ಅವರ ಕುಟುಂಬಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ನಿರ್ಧರಿಸಿದಾಗ, ಇವರಿಗೆಲ್ಲ ಹೊಸ ಬದುಕು ಹುಟ್ಟಿಕೊಂಡಿತು.