ಕರ್ನಾಟಕ

karnataka

ಬೋರಿಸ್ ಜಾನ್ಸನ್ ರಾಜೀನಾಮೆ: ಬ್ರಿಟನ್​ನ ಪ್ರತಿಪಕ್ಷದ ಕೌನ್ಸಿಲರ್, ಭಾರತೀಯ ಹೇಳಿದ್ದೇನು?

ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಮತ್ತು ಆರೋಗ್ಯ ಸಚಿವ ಸಾಜಿದ್ ಜಾವಿದ್ ಸೇರಿ ಸಚಿವರ ಸರಣಿ ರಾಜೀನಾಮೆಗಳಿಂದ ಕಂಗೆಟ್ಟು ಬೋರಿಸ್ ಜಾನ್ಸನ್ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬ್ರಿಟನ್​ನ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಭಾರತೀಯರಾದ ಇಮಾಮ್ ಹಕ್ 'ಈಟಿವಿ ಭಾರತ'ಗೆ ಪ್ರತಿಕ್ರಿಯಿಸಿದ್ದಾರೆ.

By

Published : Jul 8, 2022, 9:17 PM IST

Published : Jul 8, 2022, 9:17 PM IST

Boris Johnson had to resign, clarifies Bengali councilor in London
ಬೋರಿಸ್ ಜಾನ್ಸನ್ ರಾಜೀನಾಮೆ ಬಗ್ಗೆ ಬ್ರಿಟನ್​ನ ಪ್ರತಿಪಕ್ಷದ ಕೌನ್ಸಿಲರ್, ಭಾರತೀಯ ಹೇಳಿದ್ದೇನು?

ಕೋಲ್ಕತ್ತಾ/ಲಂಡನ್:ಬ್ರಿಟನ್​ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ಗುರುವಾರ ರಾಜೀನಾಮೆ ನೀಡಿದ್ದಾರೆ. ಕ್ಷೀಣಿಸಿದ ಜನಪ್ರಿಯತೆ ಮತ್ತು ಸ್ವಪಕ್ಷೀಯರ ವಿರೋಧಕ್ಕೆ ಗುರಿಯಾಗಿ ಬೋರಿಸ್ ಪ್ರಧಾನಿ ಹುದ್ದೆದಿಂದ ಕೆಳಗಿಳಿದಿದ್ದಾರೆ. ಅನೇಕ ಪ್ರಯತ್ನಗಳ ನಡುವೆಯೂ ಅವರಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಬೋರಿಸ್ ಜಾನ್ಸನ್ ರಾಜೀನಾಮೆ ಹಾಗೂ ಬ್ರಿಟನ್​ನ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಭಾರತೀಯರಾದ ಇಮಾಮ್ ಹಕ್ ಅಲಿಯಾಸ್ ಬಂಟಿ 'ಈಟಿವಿ ಭಾರತ' ಜೊತೆ ಮಾತನಾಡಿದ್ದಾರೆ. ಲಂಡನ್‌ನ ಈಸ್ಟ್ ಹ್ಯಾಮ್‌ನಲ್ಲಿರುವ ಕೌನ್ಸಿಲರ್, ವಿರೋಧ ಪಕ್ಷವಾದ ಲೇಬರ್ ಪಕ್ಷದ ಪ್ರತಿನಿಧಿಯಾಗಿರುವ ಇಮಾಮ್ ಹಕ್ ಮೂಲತಃ ಪಶ್ಚಿಮ ಬಂಗಾಳದ ಕಿಡ್ಡರ್‌ಪೋರ್‌ ಜಿಲ್ಲೆಯವರು.

ಕಳೆದ ಬ್ರಿಟನ್‌ನ ಚುನಾವಣೆಯಲ್ಲಿ ಯಾರನ್ನೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿರಲಿಲ್ಲ. ಇದಕ್ಕೆ ವ್ಯತಿರಿಕ್ತ ಎಂಬಂತೆ ಬಹುಮತ ಪಡೆದ ಕನ್ಸರ್ವೇಟಿವ್ ಪಕ್ಷದ ನಾಯಕರಾದ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ, ಅವರು ಅಧಿಕಾರಕ್ಕೆ ಬಂದ ಮೇಲೆ ನೈತಿಕತೆ ಮರೆತಿದ್ದರು ಎಂದು ಇಮಾಮ್ ಹಕ್ ಹೇಳಿದ್ಧಾರೆ.

ಕನ್ಸರ್ವೇಟಿವ್ ಪಕ್ಷದ ಸಮ್ಮೇಳನದವರಿಗೆ ಇರಬಹುದಿತ್ತು;ಬೋರಿಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದಿದ್ದರೆ, ಅಕ್ಟೋಬರ್​ನಲ್ಲಿ ಕನ್ಸರ್ವೇಟಿವ್ ಪಕ್ಷದ ಸಮ್ಮೇಳನ ಇತ್ತು. ಅಲ್ಲಿಯವರೆಗೆ ಅಧಿಕಾರದಲ್ಲಿ ಅವರು ಇರಬಹುದಿತ್ತು. ಬೋರಿಸ್ ಏಕೆ ರಾಜೀನಾಮೆ ನೀಡಬೇಕಾಯಿತು ಎಂದರೆ ಇದರ ಹಿಂದೆ ಹಲವಾರು ಕಾರಣಗಳಿವೆ ಎಂದು ಇಮಾಮ್ ತಿಳಿಸಿದರು.

ಬ್ರಿಟಿಷರು ನೈತಿಕತೆಯನ್ನು ಅನುಸರಿಸುವ ಪರವಾಗಿದ್ದಾರೆ. ಯಾವುದೇ ರಾಜಕೀಯ ನಾಯಕರ ಅಥವಾ ಜನಪ್ರತಿನಿಧಿಗಳ ನೈತಿಕತೆಯ ಬಗ್ಗೆ ಪ್ರಶ್ನೆ ಬಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಕೋವಿಡ್ ಸಮಯದಲ್ಲಿ ಬೋರಿಸ್ ವರ್ತನೆಯು ಎಲ್ಲರಿಗೂ ಆಘಾತ ಮತ್ತು ಕೋಪ ತರಿಸಿತ್ತು ಎಂದು ಹೇಳಿದರು.

ದೇಶವ್ಯಾಪಿ ಲಾಕ್‌ಡೌನ್ ಇರುವ ಸಂದರ್ಭದಲ್ಲೇ ಬೋರಿಸ್ ತಮ್ಮದೇ ಸರ್ಕಾರದ ಕಾನೂನನ್ನು ಮುರಿದು ಹುಟ್ಟುಹಬ್ಬದ ಸಂತೋಷ ಕೂಟ ಆಚರಿಸಿದ್ದರು. ಅವರ ನಡವಳಿಕೆಯನ್ನು ಸಾಮಾನ್ಯ ಜನರು ಕೂಡ ಒಪ್ಪಿಕೊಳ್ಳಲು ಸಿದ್ಧರಿಲಿಲ್ಲ ಎಂದು ಇಮಾಮ್ ಹಕ್ ತಿಳಿಸಿದರು.

ಇದನ್ನೂ ಓದಿ:ಬ್ರಿಟನ್​ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​

ABOUT THE AUTHOR

...view details