ನವದೆಹಲಿ: ಕೊರೊನಾ ಸೋಂಕಿತರಿಗೆ ಲಸಿಕೆ ನೀಡಿಕೆ ಸಂಬಂಧ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸೋಂಕಿತರು ಗುಣಮುಖರಾದ 3 ತಿಂಗಳ ನಂತರ ಅವರಿಗೆ ಬೋಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ತಿಳಿಸಿದ್ದಾರೆ.
ಈ ಸಂಬಂಧ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ಸೋಂಕು ಕಂಡುಬಂದ ನಂತರ ಮೂರು ತಿಂಗಳ ವರೆಗೆ ಲಸಿಕೆ ನೀಡುವುದಿಲ್ಲ. ಈ ಸಲಹೆಯು ವೈಜ್ಞಾನಿಕ ಪುರಾವೆ ಹಾಗೂ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.