ಭಾರತದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ ಆರಂಭವಾಗಿದೆ. ಜನವರಿ ಅಂತ್ಯದ ವೇಳೆಗೆ ಅಥವಾ ಫೆಬ್ರವರಿ ಆರಂಭದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚು ಮಂದಿಗೆ ಹರಡಬಹುದು. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ಮೈಕ್ರೋಬಯಾಲಜಿಸ್ಟ್ ಮತ್ತು ವೈರಾಲಜಿಸ್ಟ್ ಹಾಗೂ ಪ್ರೊಫೆಸರ್ ಆಗಿರುವ ಗಗನದೀಪ್ ಕಾಂಗ್ ಒಮಿಕ್ರಾನ್ ಕುರಿತು ಕೆಲ ಮಾಹಿತಿ ನೀಡಿದ್ದಾರೆ.
ಈಗ ನೀಡುತ್ತಿರುವ ಬೂಸ್ಟರ್ ಡೋಸ್ ಒಮಿಕ್ರಾನ್ ವಿರುದ್ಧ ಶೇ.85 ರಕ್ಷಣೆ ನೀಡುತ್ತದೆ ಎಂದು ಗಗನ್ದೀಪ್ ಕಾಂಗ್ ಹೇಳಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇದನ್ನು ಪ್ರಶ್ನೋತ್ತರ ಮಾದರಿಯಲ್ಲಿ ವಿವರಿಸಲಾಗಿದೆ.
- ಕೊರೊನಾ ವಿಚಾರದಲ್ಲಿ ನಾವು ಯಾವ ಯಾವ ಸವಾಲುಗಳನ್ನು ಎದುರಿಸಬೇಕಾಗುತ್ತದೆ?
ಈ ವರ್ಷ ಏನಾಗುತ್ತದೆ ಎಂದು ಅಂದಾಜು ಮಾಡುವುದು ಕಷ್ಟ. ನಾವು ಈಗಾಗಲೇ ಕೊರೊನಾದ ಮೂರನೇ ಅಲೆಯಲ್ಲಿದ್ದೇವೆ. ಹಿಂದಿನ ಕೊರೊನಾ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ, ಈ ಬಾರಿ ಹೆಚ್ಚಾಗಿದೆ. ಜನಸಂಖ್ಯೆ ಮತ್ತು ವ್ಯಾಕ್ಸಿನೇಷನ್ ಪ್ರಮಾಣವೂ ಕೊರೊನಾದ ಮೇಲೆ ಪರಿಣಾಮ ಬೀರುತ್ತವೆ. ಇನ್ನು ಎರಡರಿಂದ ನಾಲ್ಕು ವಾರಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದ ವೇಳೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಬಹುದು.
- ಒಮಿಕ್ರಾನ್ ರೂಪಾಂತರ ಮೂಲದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಒಮಿಕ್ರಾನ್ ಮೂಲದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಕೊರೊನಾ ವೈರಸ್ನ ಹೊಸ ರೂಪಾಂತರ ಎಂದು ಹೇಳಲಾಗುತ್ತಿದೆಯಾದರೂ, ಒಂದೊಂದು ಸಿದ್ಧಾಂತಗಳು ಒಂದೊಂದು ರೀತಿಯಾಗಿ ಹೇಳುತ್ತವೆ. ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡಿ, ನಂತರ ಅದು ಮನುಷ್ಯರಿಗೆ ಹರಡಿದ ಕಾರಣದಿಂದ ಇದರಲ್ಲಿ ಮಾರ್ಪಾಟಾಗಿದೆ ಎಂದು ಹೇಳುವವರೂ ಇದ್ದಾರೆ. (ಇದನ್ನು ರಿವರ್ಸ್ ಝೂನೋಸಿಸ್ ಎಂದು ಕರೆಯಲಾಗುತ್ತದೆ). ಮತ್ತೊಂದು ಸಿದ್ಧಾಂತದ ಪ್ರಕಾರ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿ ಇದು ಕಾಣಿಸಿಕೊಂಡು, ಹಂತ ಹಂತವಾಗಿ ಪ್ರಬಲವಾಗಿ ಒಮಿಕ್ರಾನ್ ಆಗಿ ರೂಪುಗೊಂಡಿದೆ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಒಮಿಕ್ರಾನ್ ಹರಡುವುದನ್ನು ತಡೆಯಲು ನಾವು ಅದೇ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.
- ಒಮಿಕ್ರಾನ್ ರೂಪಾಂತರ ಅಪಾಯಕಾರಿಯೇ?
ಇದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಆದರೆ, ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ವ್ಯಾಕ್ಸಿನೇಷನ್ ಪ್ರಮಾಣ ಹೆಚ್ಚಿಸಬೇಕು. ಒಮಿಕ್ರಾನ್ ಮಾಹಿತಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಬೇಕು. ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ಔಷಧಗಳು ಮತ್ತು ಲಸಿಕೆಗಳು ಜನರ ಕೈಗೆ ಎಟುಕುವಂತಿರಬೇಕು. ಮಾಸ್ಕ್ ಧರಿಸಬೇಕು. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಂದ ದೂರವಿರಬೇಕು. ಬಟ್ಟೆಯ ಮಾಸ್ಕ್ ಬದಲಿಗೆ ಸರ್ಜಿಕಲ್ ಮಾಸ್ಕ್ ಧರಿಸುವುದು ಉತ್ತಮ. N95 ಮಾಸ್ಕ್ ಧರಿಸುವುದು ಅತ್ಯುತ್ತಮ. ಇದರಿಂದ ಒಂದು ವೇಳೆ ಒಮಿಕ್ರಾನ್ ಅಪಾಯಕಾರಿ ಎಂದು ಗೊತ್ತಾದರೆ, ಸಮರ್ಥವಾಗಿ ಎದುರಿಸಬಹುದು.
- ಒಮಿಕ್ರಾನ್ ರೋಗ ಲಕ್ಷಣಗಳು ಸೌಮ್ಯವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?