ನವದೆಹಲಿ:ಕೋವಿಡ್-19 2ನೇ ಅಲೆಯ ಬಿಕ್ಕಟ್ಟಿನಿಂದಾಗಿ ಜನಪ್ರಿಯ ಮೂವಿ ಆನ್‌ಲೈನ್ ಟಿಕೆಟಿಂಗ್ ಸೈಟ್ 'ಬುಕ್ ಮೈ ಶೋ'ದಿಂದ 200 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಈ ಬಗ್ಗೆ ಮುಂಬೈ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕ ಆಶಿಶ್ ಹೇಮ್ರಾಜನಿ ಗುರುವಾರ ಟ್ವೀಟ್ ಮಾಡಿದ್ದಾರೆ. ಕೊರೊನಾ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 200 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಕಳೆದ 15 ತಿಂಗಳಿಂದ ಸಂಸ್ಥೆಗಾಗಿ ದುಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.