ಕರ್ನಾಟಕ

karnataka

ETV Bharat / bharat

ಅಲೋಪಥಿ ಚಿಕಿತ್ಸೆ ಟೀಕಿಸಿದ ರಾಮ್​ದೇವ್: ದೇಶದ್ರೋಹ ಕೇಸ್ ದಾಖಲಿಸುವಂತೆ ಕೋರ್ಟ್​ಗೆ ಅರ್ಜಿ

ಸಿಜೆಎಂ ಶೈಲೇಂದ್ರ ರೈ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ರಾಮದೇವ್ ಅವರ ಹೇಳಿಕಗಳು ಮೋಸದಿಂದ ಕೂಡಿವೆ. ವಿಪತ್ತು ನಿರ್ವಹಣಾ ಕಾಯ್ದೆಯ ಹೊರತಾಗಿ ದೇಶದ್ರೋಹ ಮತ್ತು ಅವಮಾನಕಾರಿ ಸಂಬಂಧಿಸಿದ ಐಪಿಸಿ ವಿಭಾಗಗಳಲ್ಲಿ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.

Ramdev
Ramdev

By

Published : Jun 2, 2021, 5:35 PM IST

ಮುಜಫರ್​ಪುರ: ಅಲೋಪಥಿ ವೈದ್ಯಪದ್ಧತಿ ಮತ್ತು ವೈದ್ಯರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್‌ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿ ಬಿಹಾರದ ನಿವಾಸಿಯೊಬ್ಬರು ನ್ಯಾಯಾಲಯದ ಮೋರೆ ಹೋಗಿದ್ದಾರೆ.

ಪ್ರಮುಖ ರಾಜಕಾರಣಿಗಳು, ಬಾಲಿವುಡ್ ತಾರೆಯರು ಮತ್ತು ವಿದೇಶಿ ರಾಷ್ಟ್ರಗಳ ವಿರುದ್ಧದ ಅರ್ಜಿಗಳಿಂದಾಗಿ ಸುದ್ದಿಯಲ್ಲಿ ಇರುವ ಜ್ಞಾನ ಪ್ರಕಾಶ್ ಎಂಬುವವರು ವಕೀಲ ಸುಧೀರ್ ಕುಮಾರ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಹಂಗಾಮಿ ನ್ಯಾಯಾಧೀಶ ಶೈಲೇಂದ್ರ ರಾಯ್‌ ಅವರಿಗೆ ಈ ಅರ್ಜಿ ತಲುಪಿಸಲಾಗಿದೆ.

ಸಿಜೆಎಂ ಶೈಲೇಂದ್ರ ರೈ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ರಾಮದೇವ್ ಅವರ ಹೇಳಿಕಗಳು ಮೋಸದಿಂದ ಕೂಡಿವೆ. ವಿಪತ್ತು ನಿರ್ವಹಣಾ ಕಾಯ್ದೆಯ ಹೊರತಾಗಿ ದೇಶದ್ರೋಹ ಮತ್ತು ಅವಮಾನಕಾರಿ ಸಂಬಂಧಿಸಿದ ಐಪಿಸಿ ವಿಭಾಗಗಳಲ್ಲಿ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.

ಜೂನ್ 7ರಂದು ಈ ಅರ್ಜಿಯ ಬಗ್ಗೆ ವಿಚಾರಣೆ ನಡೆಯಲಿದೆ. ಕೊರೊನಾ ವೈರಸ್ ಲಸಿಕೆಗಳು ಸೇರಿದಂತೆ ಅಲೋಪಥಿಕ್ ಔಷಧ ವ್ಯವಸ್ಥೆಯ ವಿರುದ್ಧದ ಅನಧಿಕೃತ ಟೀಕೆಗಳ ಬಗ್ಗೆ ಪತಂಜಲಿ ಸಮೂಹದ ಸಂಸ್ಥಾಪಕ ರಾಮ್​ದೇವ್, ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ABOUT THE AUTHOR

...view details