ಕರ್ನಾಟಕ

karnataka

ETV Bharat / bharat

ಮುಂಬೈ ಮೇಲೆ ಮತ್ತೆ ನ.26 ರ ಮಾದರಿ ದಾಳಿ ಬೆದರಿಕೆ ಸಂದೇಶ ರವಾನೆ - ETV bharat kannada news

ಮುಂಬೈ ಮೇಲೆ ಮತ್ತೆ ಉಗ್ರರ ಕರಿನೆರಳು ಬಿದ್ದಿದೆ. 26/11 ರ ಮಾದರಿ ಮತ್ತೊಂದು ದಾಳಿ ನಡೆಸಲಾಗುವುದು ಎಂಬ ಬೆದರಿಕೆ ಸಂದೇಶ ಪಾಕಿಸ್ತಾನದಿಂದ ರವಾನೆಯಾಗಿದೆ.

bombay-police-traffic-control-room-has-received-a-threat-message
ಮುಂಬೈ ಮೇಲೆ ಮತ್ತೆ 26/11 ರ ಮಾದರಿ ದಾಳಿ ಬೆದರಿಕೆ ಸಂದೇಶ ರವಾನೆ

By

Published : Aug 20, 2022, 9:55 AM IST

Updated : Aug 20, 2022, 10:42 AM IST

ಮುಂಬೈ:ಮುಂಬೈನ ತಾಜ್ ಹೋಟೆಲ್​ ಮೇಲೆ 2008 ರಲ್ಲಿ ನಡೆದ 26/11 ದಾಳಿ ಮಾದರಿಯಲ್ಲಿ ಮತ್ತೊಂದು ಉಗ್ರ ಕೃತ್ಯ ನಡೆಸುವ ಬಗ್ಗೆ ಪಾಕಿಸ್ತಾನದಿಂದ ಬೆದರಿಕೆ ಸಂದೇಶ ರವಾನೆಯಾಗಿದೆ. ದೇಶದಲ್ಲಿ 6 ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮುಂಬೈ ಟ್ರಾಫಿಕ್​ ಪೊಲೀಸ್​ ಕಂಟ್ರೋಲ್​ ರೂಮಿಗೇ ಈ ಸಂದೇಶ ಬಂದಿದೆ. ಮುಂಬೈ ಮೇಲೆ 26/11 ರಂತಹ ಭಯೋತ್ಪಾದಕ ದಾಳಿ ನಡೆಸಲಾಗುತ್ತದೆ. 6 ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ತಕ್ಷಣವೇ ಎಚ್ಚೆತ್ತಿರುವ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಹೆಚ್ಚಿಸಿದ್ದಾರೆ. ಅನುಮಾನಾಸ್ಪದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಬೆದರಿಕೆ ಸಂದೇಶ ರವಾನೆಯಾದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಓದಿ:ಚಾರ್ಜಿಂಗ್ ವೇಳೆ ಸ್ಫೋಟ.. ವಿಜಯನಗರದಲ್ಲಿ ಸುಟ್ಟು ಕರಕಲಾದ ಎಲೆಕ್ಟ್ರಿಕ್​ ಸ್ಕೂಟರ್

Last Updated : Aug 20, 2022, 10:42 AM IST

ABOUT THE AUTHOR

...view details