ಕರ್ನಾಟಕ

karnataka

ETV Bharat / bharat

ಆರ್ಯನ್ ಖಾನ್​ ವಿರುದ್ಧ ಅಪರಾಧ ಸಾಬೀತುಪಡಿಸುವ ಬಲವಾದ ಸಾಕ್ಷ್ಯ ಸಿಕ್ಕಿಲ್ಲ: ಬಾಂಬೆ ಹೈಕೋರ್ಟ್​ - ಆರ್ಯನ್​ ಖಾನ್ ಪ್ರಕರಣ ಬಾಂಬೆ ಹೈಕೋರ್ಟ್​

ಡ್ರಗ್‌ ಪಾರ್ಟಿಯಲ್ಲಿ ಭಾಗಿಯಾದ ಆರೋಪ ಪ್ರಕರಣದಲ್ಲಿ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಜಾಮೀನು ಸಿಕ್ಕಿದೆ. ಈ ಬಗ್ಗೆ ವಿವರವಾದ ಮಾಹಿತಿಯನ್ನ ಬಾಂಬೆ ಹೈಕೋರ್ಟ್​ ಇದೀಗ ಹೊರ ಹಾಕಿದೆ..

Aryan Khan
Aryan Khan

By

Published : Nov 20, 2021, 7:13 PM IST

ಮುಂಬೈ(ಮಹಾರಾಷ್ಟ್ರ): ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಸೇವನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಎನ್​ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್​ ನಟ ಶಾರುಖ್ ಖಾನ್​ (Bollywood actor Shah Rukh Khan) ಪುತ್ರ ಆರ್ಯನ್​​ ಖಾನ್​(Aryan Khan)ಗೆ ಈಗಾಗಲೇ ಜಾಮೀನು ಮಂಜೂರು ಮಾಡಲಾಗಿದೆ. ಇದರ ಬೆನ್ನಲ್ಲೇ ಬಾಂಬೆ ಹೈಕೋರ್ಟ್ ಜಾಮೀನಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ಹೊರ ಹಾಕಿದೆ.

ಡ್ರಗ್ಸ್​​ ಪಾರ್ಟಿ ಪ್ರಕರಣ(Aryan Khan Case)ದಲ್ಲಿ ಆರ್ಯನ್ ಖಾನ್​​, ಅರ್ಬಾಜ್​ ಖಾನ್​​ ಹಾಗೂ ಮತ್ತೋರ್ವ ವ್ಯಕ್ತಿ ಧಮೇಚಾ ಅಪರಾಧವೆಸಗಿದ್ದಾರೆಂದು ಸಾಬೀತುಪಡಿಸುವ ಯಾವುದೇ ಬಲವಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಬಾಂಬೆ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ 14 ಪುಟಗಳ ವಿವರವಾದ ಮಾಹಿತಿ ಹಂಚಿಕೊಂಡಿರುವ ಬಾಂಬೆ ಹೈಕೋರ್ಟ್​, ಆತ ಅಪರಾಧವೆಸಗಿದ್ದಾನೆಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದೆ.

ಇದನ್ನೂ ಓದಿರಿ:Heart stroke: ಬೈಕ್​ನಲ್ಲಿ ತೆರಳುತ್ತಿದ್ದ ಯುವಕನಿಗೆ ಹೃದಯಾಘಾತ.. ಆಸ್ಪತ್ರೆ ತಲುಪುವಷ್ಟರಲ್ಲೇ ಸಾವು

ಅಕ್ಟೋಬರ್​​ 3ರಂದು ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಶಾರೂಖ್ ಪುತ್ರ ಆರ್ಯನ್​ ಸೇರಿದಂತೆ ಕೆಲವರ ಬಂಧನ ಮಾಡಲಾಗಿತ್ತು.

ಇದರ ವಾದ-ಪ್ರತಿವಾದ ಆಲಿಸಿದ್ದ ಬಾಂಬೆ ಹೈಕೋರ್ಟ್(Bombay High Court ) ಅಕ್ಟೋಬರ್​​ 29ರಂದು ಆರ್ಯನ್​ ಖಾನ್​ಗೆ ಜಾಮೀನು ನೀಡಿತ್ತು. ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿ ಎನ್​.ಡಬ್ಲ್ಯೂ ಸಾಂಬ್ರೆ(Justice Nitin Sambre) ನೇತೃತ್ವದ ಏಕಸದಸ್ಯ ಪೀಠ ಇಂದು ತನ್ನ ಅಭಿಪ್ರಾಯ ಹೊರ ಹಾಕಿದೆ. ಈ ಬಗ್ಗೆ ವಿವರವಾದ ಪ್ರತಿಯನ್ನ ಕೂಡ ಪ್ರಕಟಿಸಿದೆ.

ಮೂವರು ಸ್ನೇಹಿತರ ನಡುವೆ ವ್ಯಾಟ್ಸ್​ಆ್ಯಪ್(WhatsApp conversation)​ ಚಾಟ್​ಗಳಲ್ಲಿ ಆಕ್ಷೇಪಾರ್ಹ ಅಂಶಗಳು ಲಭ್ಯವಾಗಿಲ್ಲ. ಎನ್​ಸಿಬಿ(Narcotics Control Bureau) ದಾಖಲು ಮಾಡಿಕೊಂಡಿರುವ ದೂರಿನಲ್ಲಿ ಆರ್ಯನ್ ಖಾನ್(Aryan Khan drugs bust case) ತಪ್ಪೊಪ್ಪಿಗೆ ನೀಡಿದ್ದಾರೆ ಎಂಬ ಹೇಳಿಕೆಯನ್ನ ತನಿಖೆ ನಡೆಸುವ ಉದ್ದೇಶದಿಂದ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಜಾಮೀನು ಆದೇಶದಲ್ಲಿ ವಿವರಿಸಲಾಗಿದೆ.

ABOUT THE AUTHOR

...view details