ಕರ್ನಾಟಕ

karnataka

ETV Bharat / bharat

ಆರ್‌ಬಿಐ ಮುಂಬೈ ಕಚೇರಿ, ಖಾಸಗಿ ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್ - Finance Minister Nirmala Sitharaman

RBI Governors email receives bomb threat message: "ಭಾರತದ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಮಾಡಿರುವ ಆರ್‌ಬಿಐ ಸೇರಿದಂತೆ ಖಾಸಗಿ ಬ್ಯಾಂಕ್‌ಗಳಲ್ಲಿ ಬಾಂಬ್‌ ಇರಿಸಲಾಗಿದೆ" ಎಂಬ ಒಕ್ಕಣೆ ಬರೆದು ಇಮೇಲ್‌ ಕಳುಹಿಸಲಾಗಿದೆ.

Bomb threat to RBI Mumbai office and private banks; RBI Governors email receives message
'ಇತಿಹಾಸದಲ್ಲೇ ಅತಿದೊಡ್ಡ ಹಗರಣ': ಆರ್‌ಬಿಐ ಕಚೇರಿಗೆ ಬಾಂಬ್ ಬೆದರಿಕೆ

By ETV Bharat Karnataka Team

Published : Dec 26, 2023, 8:06 PM IST

ಮುಂಬೈ(ಮಹಾರಾಷ್ಟ್ರ): ಭಾರತೀಯ ರಿಸರ್ವ್ ಬ್ಯಾಂಕ್​ನ(ಆರ್‌ಬಿಐ) ಮುಂಬೈ ಕಚೇರಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಗವರ್ನರ್ ಇ-ಮೇಲ್‌ಗೆ ಸಂದೇಶ ಬಂದಿದೆ. ಆರ್‌ಬಿಐ ಉನ್ನತ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಂದು ಬೆಳಿಗ್ಗೆ 10:50ರ ಸಮಾರಿಗೆ 'ಖಲೀಫತ್ ಇಂಡಿಯಾ'ದ ಇ-ಮೇಲ್ (khalifatindia@gmail.com) ಐಡಿಯಿಂದ ಈ ಬೆದರಿಕೆ ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಮೇಲ್ ಕಳುಹಿಸಿದ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ ಎಂದು ಮುಂಬೈ ಉಪ ಪೊಲೀಸ್ ಆಯುಕ್ತ ರಾಜ್​ ತಿಲಕ್ ರೋಷನ್ ಹೇಳಿದ್ದಾರೆ.

ಇಮೇಲ್‌ನಲ್ಲಿ, ''ನಾವು ಮುಂಬೈನ ವಿವಿಧ ಸ್ಥಳಗಳಲ್ಲಿ 11 ಬಾಂಬ್‌ಗಳನ್ನು ಇರಿಸಿದ್ದೇವೆ. ಭಾರತೀಯ ರಿಸರ್ವ್ ಬ್ಯಾಂಕ್ ಹಾಗು ಖಾಸಗಿ ಬ್ಯಾಂಕ್‌ಗಳಲ್ಲೂ ಬಾಂಬ್ ಇಡಲಾಗಿದೆ. ಈ ಬ್ಯಾಂಕ್‌ಗಳು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಮಾಡಿವೆ. ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೆಲವು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಮತ್ತು ಕೆಲವು ಮಾಜಿ ಮಂತ್ರಿಗಳೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಖಚಿತ ಪುರಾವೆಗಳಿವೆ'' ಎಂದು ಉಲ್ಲೇಖಿಸಲಾಗಿದೆ.

''ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನ್ಯೂ ಸೆಂಟ್ರಲ್ ಆಫೀಸ್ ಬಿಲ್ಡಿಂಗ್ ಫೋರ್ಟ್, ಮುಂಬೈ ಮತ್ತು ಎಚ್‌ಡಿಎಫ್‌ಸಿ ಹೌಸ್ ಚರ್ಚ್‌ಗೇಟ್, ಮುಂಬೈ, ಐಸಿಐಸಿಐ ಬ್ಯಾಂಕ್ ಟವರ್ಸ್ ಬಿಕೆಸಿ, ಮುಂಬೈ.. ಈ ಮೂರು ಸ್ಥಳಗಳಲ್ಲಿ ಮಧ್ಯಾಹ್ನ 1:30ಕ್ಕೆ ಬಾಂಬ್ ಸ್ಫೋಟಿಸಲಿವೆ. ಆರ್‌ಬಿಐ ಗವರ್ನರ್ ಮತ್ತು ಹಣಕಾಸು ಸಚಿವರು ತಕ್ಷಣ ರಾಜೀನಾಮೆ ನೀಡಬೇಕು. ಈ ಕುರಿತು ಪತ್ರಿಕಾ ಹೇಳಿಕೆ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅದೇ ರೀತಿ ಈ ಇಬ್ಬರು ಹಾಗೂ ಹಗರಣದಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ. ಮಧ್ಯಾಹ್ನ 1:30ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಎಲ್ಲ 11 ಬಾಂಬ್‌ಗಳನ್ನು ಒಂದರ ನಂತರ ಒಂದರಂತೆ ಸ್ಫೋಟಿಸಲಾಗುವುದು'' ಎಂಬುದಾಗಿ ಬೆದರಿಕೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಮುಂಬೈ ಏರ್‌ಪೋರ್ಟ್‌ ಟರ್ಮಿನಲ್ 2ಗೆ ಸ್ಫೋಟ ಬೆದರಿಕೆ; ಬಿಟ್‌ಕಾಯಿನ್‌ ರೂಪದಲ್ಲಿ $1 ಮಿಲಿಯನ್‌ಗೆ ಬೇಡಿಕೆ

ABOUT THE AUTHOR

...view details