ಕರ್ನಾಟಕ

karnataka

ETV Bharat / bharat

ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ; ಯೋಗಿ 'ಗೋ ಸೇವಕ' ಎಂದು ಮೂದಲಿಕೆ - ಅಯೋಧ್ಯೆ ರಾಮ ಮಂದಿರ

Bomb threat to Ayodhya Ram Mandir: ಅಯೋಧ್ಯೆ ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಬಂದಿದೆ. ಪಾಕಿಸ್ತಾನದ ಐಎಸ್‌ಐ ಏಜೆಂಟ್ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

CM Yogi Adityanath  ADG Amitabh Yash  E mail Threat bomb  Threat bomb Ram Temple  ಅಯೋಧ್ಯೆ ರಾಮ ಮಂದಿರ  ಬಾಂಬ್ ಬೆದರಿಕೆ ಸಂದೇಶ
ಅಯೋಧ್ಯೆ ರಾಮ ಮಂದಿರನ್ನು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ

By ETV Bharat Karnataka Team

Published : Jan 1, 2024, 10:43 AM IST

ಅಯೋಧ್ಯೆ(ಉತ್ತರಪ್ರದೇಶ):ಜನವರಿ 22ರಂದು ಉದ್ಘಾಟನಾ ಸಮಾರಂಭಕ್ಕೆ ಸಿದ್ಧಗೊಂಡಿರುವ ನೂತನ ಭವ್ಯ ಶ್ರೀರಾಮ ಮಂದಿರವನ್ನು ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಸಂಚಲನ ಮೂಡಿಸಿವೆ. ಕೆಲವು ದಿನಗಳ ಹಿಂದೆ, ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಎಂಬವರ ಇ-ಮೇಲ್ ಐಡಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಏಜೆಂಟ್‌ನಿಂದ ಬೆದರಿಕೆ ಬಂದಿರುವುದಾಗಿ ತಿಳಿದುಬಂದಿದೆ.

ಡಿಸೆಂಬರ್ 27, 2023ರಂದು ದೇವೇಂದ್ರ ತಿವಾರಿ ಅವರಿಗೆ ಪಾಕಿಸ್ತಾನದ ಐಎಸ್ಐನೊಂದಿಗೆ ಸಂಪರ್ಕ ಹೊಂದಿರುವ ಜುಬೇರ್ ಖಾನ್ ಎಂಬಾತ ಇ-ಮೇಲ್ ಕಳುಹಿಸಿದ್ದಾನೆ. ದೇವೇಂದ್ರ ತಿವಾರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್‌ಟಿಎಫ್ ಎಡಿಜಿ ಅಮಿತಾಬ್ ಅವರನ್ನು ಗೋ ಸೇವಕರು ಎಂದು ಮೂದಲಿಸಿ ಬೆದರಿಕೆ ಕಳುಹಿಸಲಾಗಿದೆ.

ಇದರೊಂದಿಗೆ, ದೇವೇಂದ್ರ ತಿವಾರಿ ತಮ್ಮ ಎಕ್ಸ್​ ಖಾತೆಯಲ್ಲಿ ತಮಗೆ ಬಂದ ಬೆದರಿಕೆ ಇ-ಮೇಲ್‌ನ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ್ದಾರೆ. ಯುಪಿ ಪೊಲೀಸರ ಜತೆಗೆ ಸಿಎಂ ಯೋಗಿ, ಪ್ರಧಾನಿ ನರೇಂದ್ರ ಮೋದಿ ಮತ್ತಿತರರನ್ನು ಟ್ಯಾಗ್ ಮಾಡಲಾಗಿದೆ. ಈ ಕುರಿತು ವಿಶೇಷ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ತಿವಾರಿ ದೂರಿನಂತೆ ಲಖನೌದ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಹೇಂದ್ರ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಟಿಎಸ್ ಮತ್ತು ಎಸ್​ಟಿಎಫ್ ತಂಡಗಳೂ ತನಿಖೆ ಕೈಗೊಂಡಿವೆ. ಜುಬೇರ್ ಖಾನ್​ಗಾಗಿ ಶೋಧ ಕಾರ್ಯಾರಂಭಿಸಲಾಗಿದೆ. ಈ ಹಿಂದೆಯೂ ನನಗೆ ಇಂತಹ ಬೆದರಿಕೆ ಮೇಲ್‌ಗಳು ಬಂದಿದ್ದವು ಎಂದು ತಿವಾರಿ ಹೇಳಿದ್ದಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ರಿಸರ್ವ್ ಬ್ಯಾಂಕ್‌ಗೆ ಬೆದರಿಕೆ ಮೇಲ್: ಕೆಲವು ದಿನಗಳ ಹಿಂದೆ ಮುಂಬೈನಲ್ಲಿ 11 ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್‌ಗೆ ಬೆದರಿಕೆ ಇ-ಮೇಲ್ ಬಂದಿತ್ತು. ಆರ್‌ಬಿಐ ಕೇಂದ್ರ ಕಚೇರಿ ಸೇರಿದಂತೆ ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಕಚೇರಿಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ದಾಳಿಕೋರರು ತಿಳಿಸಿದ್ದರು. ಒಂದರ ಹಿಂದೊಂದರಂತೆ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಎಚ್ಚರಿಸಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಸಂಬಂಧಪಟ್ಟ ಸ್ಥಳಗಳನ್ನು ಪರಿಶೀಲಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ರಾಮನ ಪ್ರಾಣ ಪ್ರತಿಷ್ಠಾಪನೆಗೆ ಛತ್ತೀಸ್‌ಗಢದಿಂದ 300 ಮೆಟ್ರಿಕ್ ಟನ್ ಅಕ್ಕಿ ರವಾನೆ

ABOUT THE AUTHOR

...view details