ನವದೆಹಲಿ:ಇರಾನ್ನಿಂದ ಚೀನಾಕ್ಕೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಚೀನಾದ ಭದ್ರತಾ ಸಂಸ್ಥೆಗಳು ಭಾರತ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದು, ಭಾರತದ ವಿಮಾನಗಳು ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಇರಾನ್ನಿಂದ ಚೀನಾಕ್ಕೆ ಹಾರಿದ್ದ ವಿಮಾನ ಭಾರತದ ವಾಯುಪ್ರದೇಶಕ್ಕೆ ಬಂದ ಬಳಿಕ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಚೀನಾದ ಭದ್ರತಾ ಸಂಸ್ಥೆಗಳು ಮಾಹಿತಿ ನೀಡಿವೆ. ಇದರಿಂದ ವಿಮಾನವನ್ನು ಇಲ್ಲಿಯೇ ತಡೆದು, ಪ್ರಯಾಣಿಕರ ರಕ್ಷಣೆಗೆ ಕೋರಲಾಗಿದೆ. ಭಾರತದ ಯುದ್ಧ ವಿಮಾನಗಳು ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.