ನಳಂದಾ (ಬಿಹಾರ): ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಳಂದಾದಲ್ಲಿ ನಡೆಸುತ್ತಿದ್ದ ಸಾರ್ವಜನಿಕ ಸಭೆ ವೇಳೆ ಭಾರಿ ಭದ್ರತೆ ಲೋಪವಾಗಿದೆ. ಮುಖ್ಯಮಂತ್ರಿಗಳಿದ್ದ 15ರಿಂದ 18 ಅಡಿಗಳ ದೂರದಲ್ಲೇ ಸ್ಫೋಟ ಸಂಭವಿಸಿತು. ಈ ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸ್ಫೋಟದ ಪರಿಣಾಮ ಕಾಲ್ತುಳಿತ ಉಂಟಾಗಿದೆ. ನಾಲ್ಕು ದಿನಗಳ ಪ್ರವಾಸಕ್ಕಾಗಿ ನಿತೀಶ್ ಕುಮಾರ್ ನಳಂದಾದ ಪ್ರವಾಸದಲ್ಲಿದ್ದಾರೆ. ಮಂಗಳವಾರ ಇಲ್ಲಿನ ಗಾಂಧಿ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕರ ಸಂವಾದ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ಆಗಮಿಸಿದ ಕೆಲವೇ ಹೊತ್ತಲ್ಲಿ ಈ ಘಟನೆ ನಡೆದಿದೆ.