ತರನ್-ತರನ್ (ಪಂಜಾಬ್): ಪೈಪ್ಲೈನ್ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿರುವಾಗ ಬಾಂಬ್ ಪತ್ತೆಯಾಗಿರುವ ಘಟನೆ ಪಂಜಾಬ್ನ ತರನ್-ತರನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಬಂದು ನಿಷ್ಕ್ರಿಯಗೊಳಿಸಿದ್ದಾರೆ.
ಪೈಪ್ಲೈನ್ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿದ್ದಾಗ ಬಾಂಬ್ ಪತ್ತೆ - ರಸ್ತೆ ಅಗೆಯುತ್ತಿರುವಾಗ ಬಾಂಬ್ ಪತ್ತೆ
ಭಿಖಿವಿಂದ್ ಪಟ್ಟಣದಲ್ಲಿ ಪೈಪ್ಲೈನ್ ಕಾಮಗಾರಿಯಾಗಿ ಕಾರ್ಮಿಕರು ರಸ್ತೆ ಅಗೆಯುತ್ತಿದ್ದರು. ಈ ವೇಳೆ ಬಾಂಬ್ ಪತ್ತೆಯಾಗಿದೆ.
ಪೈಪ್ಲೈನ್ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿದ್ದಾಗ ಬಾಂಬ್ ಪತ್ತೆ
ಬಾಂಬ್ ಕಂಡುಬಂದ ಬಗ್ಗೆ ಮಾಜಿ ಸೈನಿಕರೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸದ್ಯ ಸ್ಥಳದಲ್ಲಿ ಕಾಮಗಾರಿ ಸೇರಿ ಎಲ್ಲ ಚಟುವಟಿಕಗಳಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 'ಲಿಟಲ್ ಚಾಂಪ್'ಗೆ ಲಿವರ್ ಸಮಸ್ಯೆ: ಚಿಕಿತ್ಸಾ ವೆಚ್ಚಕ್ಕೆ ರೇಶಮಿಯಾ ಕೊಟ್ಟ ವಾಚ್ ಹರಾಜಿಗೆ!