ಧನಬಾದ್(ಜಾರ್ಖಂಡ್): ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಸುದ್ದಿ ಕೇಳಿ ಬಂದಿದೆ. ಜೋಗಟಾ ಪೊಲೀಸ್ ಠಾಣೆ ವ್ಯಾಪ್ತಿಯ ರೂಸ್ಸಿ ಮಾರ್ಗದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪೊದೆಗಳಲ್ಲಿ ಭಾರೀ ಸ್ಫೋಟಕ ವಸ್ತುಗಳ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಜೋಗಟಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅದೇ ವೇಳೆ ಸ್ಫೋಟದಿಂದಾಗಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡಿರುವ ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧನ್‌ಬಾದ್‌ನಲ್ಲಿ ಮತ್ತೆ ಸ್ಫೋಟ:ಸಿಕ್ಕಿರುವ ಮಾಹಿತಿ ಪ್ರಕಾರ ಸಿಜುವಾ ಬೀಸ್‌ನ ಮಕ್ಕಳು ಜೋಗಾಟಾದಿಂದ ರೂಸ್ಸಿಗೆ ತೆರಳುವ ಮಾರ್ಗದಲ್ಲಿ ಮೋರಿಯ ಬಳಿಯ ಪೊದೆಗಳಲ್ಲಿ ಹಣ್ಣುಗಳನ್ನು ಕೀಳುತ್ತಿದ್ದರು. ಮಕ್ಕಳು ಹಣ್ಣುಗಳನ್ನು ಕೀಳಲು ಮರಕ್ಕೆ ಕಲ್ಲು ಎಸೆದಿದ್ದಾರೆ. ಈ ವೇಳೆ ಕಲ್ಲೊಂದು ಸ್ಫೋಟದ ವಸ್ತುಗಳ ಮೇಲೆ ಬಿದ್ದು ಸ್ಫೋಟಗೊಂಡಿದೆ. ಬಳಿಕ ಮಕ್ಕಳು ಸ್ಫೊಟದ ವಸ್ತುಗಳ ಬಳಿ ತೆರಳಿದ್ದಾರೆ. ಅಲ್ಲಿದ್ದ ಬಾಕ್ಸ್‌ವೊಂದು ತೆರೆದಿದ್ದಾರೆ. ನಂತರ ಬಾಕ್ಸ್ ಸ್ಫೋಟಗೊಂಡಿದೆ ಎಂದು ಕೆಲವರ ಮಾತಾಗಿದೆ. ಸ್ಫೋಟದಲ್ಲಿ ಗಾಯಗೊಂಡ ಬಾಲಕ ಸೊಹ್ರಾಬ್ ಹೇಳುವ ಪ್ರಕಾರ, ನಾವು ಹಣ್ಣು ಕೀಳಲು ಮರಕ್ಕೆ ಕಲ್ಲು ಎಸೆದೆವು. ಈ ವೇಳೆ ಕಲ್ಲು ಮರದಿಂದ ಸ್ವಲ್ಪ ದೂರದಲ್ಲಿ ಬಿದ್ದಿದೆ. ಕಲ್ಲು ಬಿದ್ದ ನಂತರ ಇದ್ದಕ್ಕಿದ್ದಂತೆ ಆ ಸ್ಥಳದಲ್ಲಿ ಸ್ಫೋಟ ಸಂಭವಿಸಿತು ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಟ್ಟೆಚ್ಚರ ವಹಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಾಯಗೊಂಡ ಮಕ್ಕಳಿಗೆ ಮುಂದುವರಿದ ಚಿಕಿತ್ಸೆ: ಸ್ಫೋಟದಲ್ಲಿ ಗಾಯಗೊಂಡ ನಾಲ್ವರು ಮಕ್ಕಳನ್ನು ಚಿಕಿತ್ಸೆಗಾಗಿ ಬರ್ತಂಡ್‌ನ ದ್ವಾರಿಕಾ ದಾಸ್ ಸ್ಮಾರಕ ಆಸ್ಪತ್ರೆಗೆ ಕರೆತರಲಾಯಿತು. ಈ ನಾಲ್ವರಲ್ಲಿ ಶಶಾಂಕ್ ಎಂಬ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಈತನನ್ನು ದುರ್ಗಾಪುರ ಮಿಷನ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಚಿಕಿತ್ಸೆಗೆ ದಾಖಲಾಗಿದ್ದ ಸೊಹ್ರಾಬ್ ಎಂಬ ಬಾಲಕನ ಎರಡೂ ಕಾಲುಗಳಿಗೆ ಗಾಯವಾಗಿದ್ದು, ಬ್ಯಾಂಡೇಜ್ ಹಾಕಲಾಗಿದೆ. ಚಿಕಿತ್ಸೆ ನಂತರ ಸೊಹ್ರಾಬ್ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಹಾಗೂ ದ್ವಾರಕಾ ದಾಸ್ ಸ್ಮಾರಕ ಆಸ್ಪತ್ರೆಯಲ್ಲಿ ಸಮರ್ ಎಂಬ ಮಗುವಿನ ಚಿಕಿತ್ಸೆ ನಡೆಯುತ್ತಿದೆ. ಅಪಘಾತದಲ್ಲಿ ಗಾಯಗೊಂಡಿರುವ ಇನ್ನೋರ್ವ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.