ಚಂಬಾ (ಹಿಮಾಚಲ ಪ್ರದೇಶ) : ಇಲ್ಲಿನ ಚಂಬಾ ಜಿಲ್ಲೆಯ ತೀಸಾದಿಂದ ಬೈರಾಗರ್ಗೆ ಹೋಗುವ ರಸ್ತೆ ಮಾರ್ಗದಲ್ಲಿ ಸಿಗುವ ತರ್ವಾಯಿ ಎಂಬಲ್ಲಿ ಬೊಲೆರೊ ವಾಹನವೊಂದು 100 ಮೀಟರ್ ಆಳ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ 6 ಮಂದಿ ಹಿಮಾಚಲ ಪ್ರದೇಶದ ಪೊಲೀಸ್ ಸಿಬ್ಬಂದಿ ಹಾಗೂ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಪೊಲೀಸರು ಹಾಗೂ ಮತ್ತೊ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಂಬಾ ಜಿಲ್ಲೆಯ ಜವಾಹರಲಾಲ್ ನೆಹರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Himachal Accident: ಕಂದಕಕ್ಕೆ ಬಿದ್ದ ಬೊಲೆರೊ ವಾಹನ: 6 ಪೊಲೀಸ್ ಸಿಬ್ಬಂದಿ ಸೇರಿ 7 ಸಾವು - boler fell into deep gorge in chamba in himachal
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ಗಾಯಗೊಂಡವರನ್ನು ಚಂಬಾ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂದಕಕ್ಕೆ ಬಿದ್ದ ಬೊಲೆರೊ ವಾಹನ
ಮಾಹಿತಿ ಪ್ರಕಾರ, ಬೊಲೆರೊ ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 9 ಪೊಲೀಸ್ ಸಿಬ್ಬಂದಿ, ವಾಹನ ಚಾಲಕ ಹಾಗೂ ಸ್ಥಳೀಯರಿದ್ದರು. ಬೊಲೆರೊ ತೀಸಾದಿಂದ ಬೈರಾಗರ್ ಕಡೆಗೆ ಹೋಗುತ್ತಿತ್ತು. ತರ್ವಾಯಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಏಳು ಜನ ಸಾವನ್ನಪ್ಪಿದ್ದು, ಗಾಯಗೊಂಡ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸಂತ್ರಸ್ತರ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ತಿರುವಿನಲ್ಲಿ ಸೋಲಾರ್ ಪ್ಲೇಟ್ ತುಂಬಿದ್ಧ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಜಸ್ಟ್ ಮಿಸ್