ಪುಣೆ(ಮಹಾರಾಷ್ಟ್ರ):ಬಿಜೆಪಿ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರ ಬಂಗಲೆಯ ಹಿಂಭಾಗದಲ್ಲಿ ಮಹಿಳೆಯ ಕೊಳೆತ ಮೃತದೇಹವು ಭಾಗಶಃ ಹೂತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸತಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಾರಾಷ್ಟ್ರದ ಮಾಜಿ ಎಂಎಲ್‌ಸಿ ಕಾಂತ ನಾಲವಾಡೆ ಅವರ ಕುಟುಂಬ ಸದಸ್ಯರು ಬಂಗಲೆಯ ಆವರಣ ಸ್ವಚ್ಛಗೊಳಿಸುತ್ತಿದ್ದಾಗ ಶವ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಎಂಎಲ್‌ಸಿ ಮನೆಯವರು ಕೆಲವೊಮ್ಮೆ ಮಾತ್ರ ಬಂಗಲೆಯಲ್ಲಿ ಇರುತ್ತಿದ್ದರು. ಹೀಗಾಗಿ ಬಂಗಲೆಗೆ ಬೀಗ ಹಾಕಲಾಗಿತ್ತು. ಶುಕ್ರವಾರ ಕುಟುಂಬಸ್ಥರು ಬಂಗಲೆ ಆವರಣದಲ್ಲಿ ಸ್ವಚ್ಛಗೊಳಿಸುತ್ತಿರುವಾಗ ಮಣ್ಣಿನಲ್ಲಿ ಭಾಗಶಃ ಹುದುಗಿದ್ದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಕೊಳೆತ ಶವ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.