ಕೊರೊನಾ ವೈರಸ್ ಮೃತ ದೇಹದ ಮೇಲೆ ಎಷ್ಟು ದಿನಗಳವರೆಗೆ ಜೀವಂತವಾಗಿರುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ, ಉಕ್ರೇನ್ನಲ್ಲಿ ನಡೆದ ಅಧ್ಯಯನವೊಂದರಲ್ಲಿ ಮಾತ್ರ ಅಚ್ಚರಿಯ ಫಲಿತಾಂಶ ಗೋಚರವಾಗಿದೆ.
ಉಕ್ರೇನ್ನಲ್ಲಿ ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಯ ಶವ ಪರೀಕ್ಷೆಯ ವೇಳೆ ಕೊರೊನಾ ಸೋಂಕು ದೃಢವಾಗಿದೆ. ಈ ವೇಳೆ ಮೃತ ದೇಹದಲ್ಲಿ ಎಷ್ಟು ದಿನಗಳವರೆಗೆ ಸೋಂಕು ಇರುತ್ತದೆ ಎಂದು ಅಧ್ಯಯನ ನಡೆಸಿದಾಗ, 6 ವಾರಗಳಲ್ಲಿ ನಡೆಸಿದ 28 ಪರೀಕ್ಷೆಯಲ್ಲೂ ಸೋಂಕು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.
ವ್ಯಕ್ತಿಯ ಸಾವಿಗೂ ಮುನ್ನ ಕೊರೊನಾ ಸೋಂಕಿನ ಯಾವ ಲಕ್ಷಣವೂ ಇರಲಿಲ್ಲ. ಬಳಿಕ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಸೋಂಕು ಇರುವುದು ದೃಢವಾಗಿದೆ. ಬಳಿಕ 41 ದಿನಗಳಲ್ಲಿ ನಡೆಸಲಾದ 28 ಪರೀಕ್ಷೆಗಳಲ್ಲೂ ಸೋಂಕು ಪಾಸಿಟಿವ್ ಬಂದಿದೆ ಎಂದು ಇಟಲಿಯ ಡಿಅನ್ನುಂಜಿಯೋ ವಿವಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.