ಗ್ವಾಲಿಯರ್(ಮಧ್ಯಪ್ರದೇಶ): 9 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಕಾಮುಕರು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು, ತದನಂತರ ಮೃತದೇಹವನ್ನು ಪೊದೆಗೆಸೆದು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭೀಕರ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಹುಡುಗಿಯನ್ನು ಆಕೆಯ ಸಂಬಂಧಿಕರೇ ಕರೆದೊಯ್ದು ಕೊಲೆ ಮಾಡಿದ್ದಾರೆಂಬ ಶಂಕೆ ಸಹ ವ್ಯಕ್ತವಾಗಿದೆ. ಹೆಣ್ಣು ಮಗುವನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಸಿನಿಮಾದಿಂದ ಸ್ಫೂರ್ತಿ ಪಡೆದು ಮಗಳಿಗೋಸ್ಕರ 107 ದ್ವಿಚಕ್ರ ವಾಹನ ಕದ್ದ ಅಪ್ಪ!
ಕಳೆದ ಎರಡು ದಿನಗಳ ಹಿಂದೆ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಬಾಲಕಿ ತನ್ನ ಸಹೋದರ ಮತ್ತು ಮಕ್ಕಳೊಂದಿಗೆ ಹೊರಗಡೆ ಆಟವಾಡ್ತಿದ್ದಳು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಆದರೆ, ಸಂಬಂಧಿಕರೇ ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲ್ವೇ ಓವರ್ ಬ್ರಿಡ್ಜ್ ಕೆಳಗೆ ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಅಪ್ರಾಪ್ತ ಬಾಲಕಿಯ ಶವ ಧರಮ್ ಕಾಂಟೆ ಬಳಿ ಪತ್ತೆಯಾಗಿದೆ. ಈ ವೇಳೆ ಬಾಲಕಿಯ ಮೈಮೇಲೆ ಬಟ್ಟೆ ಸಹ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.