ಕರ್ನಾಟಕ

karnataka

ETV Bharat / bharat

ನೇಪಾಳ ವಿಮಾನ ದುರಂತದಲ್ಲಿ 22 ಬಲಿ : ಕಠ್ಮಂಡುವಿನಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ - Bodies of all 22 victims of Nepal plane crash brought to Kathmandu for post mortem

ಕೆನಡಾ ನಿರ್ಮಿತ ಟರ್ಬೊಪ್ರೊಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪ್ರವಾಸಿ ನಗರವಾದ ಪೊಖರಾದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ನಾಲ್ವರು ಭಾರತೀಯರು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರು ಸೇರಿದಂತೆ ಒಟ್ಟು 22 ಜನರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

ನೇಪಾಳ ವಿಮಾನದಲ್ಲಿದ್ದ ಭಾರತೀಯರು ಸೇರಿದಂತೆ 22 ಜನರ ಸಾವು
ನೇಪಾಳ ವಿಮಾನದಲ್ಲಿದ್ದ ಭಾರತೀಯರು ಸೇರಿದಂತೆ 22 ಜನರ ಸಾವು

By

Published : May 31, 2022, 7:11 PM IST

ಕಠ್ಮಂಡು (ನೇಪಾಳ):ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾದ ನಾಲ್ವರು ಭಾರತೀಯರು ಸೇರಿದಂತೆ 22 ಜನರ ಮೃತದೇಹಗಳನ್ನು ಕಠ್ಮಂಡುವಿಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ.

ಕೆನಡಾ ನಿರ್ಮಿತ ಟರ್ಬೊಪ್ರೊಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪ್ರವಾಸಿ ನಗರವಾದ ಪೊಖರಾದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ನಾಲ್ವರು ಭಾರತೀಯರು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರು ಸೇರಿದಂತೆ ಒಟ್ಟು 22 ಜನರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೋಧನಾ ಆಸ್ಪತ್ರೆಗೆ ರವಾನೆ : ತಾರಾ ಏರ್‌ಗೆ ಸೇರಿದ ವಿಮಾನದ ಅವಶೇಷಗಳ ಸ್ಥಳದಿಂದ 21 ಶವಗಳನ್ನು ಸೋಮವಾರ ಹೊರತೆಗೆದಿದ್ದಾರೆ. ಇಂದು ಈ ಅವಶೇಷಗಳ ಸ್ಥಳದಿಂದ ಕೊನೆಯ ದೇಹವನ್ನು ಸಹ ಪತ್ತೆ ಮಾಡಲಾಗಿದೆ. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಟಿಐಎ) ಜನರಲ್ ಮ್ಯಾನೇಜರ್ ಪ್ರೇಮ್ ನಾಥ್ ಠಾಕೂರ್ ಈ ಬಗ್ಗೆ ಮಾಹಿತಿ ನೀಡಿ, ಸೋಮವಾರ ಸಂಜೆ 10 ಶವಗಳನ್ನು ಇಲ್ಲಿಗೆ ತರಲಾಗಿತ್ತು.

ಉಳಿದ 12 ಶವಗಳನ್ನು ನೇಪಾಳ ಸೇನಾ ಹೆಲಿಕಾಪ್ಟರ್ ಮೂಲಕ ಇಂದು ಇಲ್ಲಿಗೆ ತರಲಾಗಿದೆ. ಎಲ್ಲಾ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಮೃತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ತನಿಖಾ ಆಯೋಗ ರಚನೆ : ತಾರಾ ಏರ್ ವಿಮಾನ ಪತನಕ್ಕೆ ಕಾರಣವನ್ನು ಕಂಡು ಹಿಡಿಯಲು ಹಿರಿಯ ಏರೋನಾಟಿಕಲ್ ಇಂಜಿನಿಯರ್ ರತೀಶ್ ಚಂದ್ರ ಲಾಲ್ ಸುಮನ್ ನೇತೃತ್ವದ ಐದು ಸದಸ್ಯರ ತನಿಖಾ ಆಯೋಗವನ್ನು ಸರ್ಕಾರ ರಚಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರತಿಕೂಲ ಹವಾಮಾನವೇ ವಿಮಾನ ಪತನಕ್ಕೆ ಕಾರಣ. ವಿಮಾನದ ಕಪ್ಪು ಪೆಟ್ಟಿಗೆಯನ್ನು ಅನುಭವಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪರ್ವತ ಮಾರ್ಗದರ್ಶಕರ ತಂಡವು ಮಂಗಳವಾರ ಅಪಘಾತದ ಸ್ಥಳದಿಂದ ಹಿಂಪಡೆದಿದೆ ಮತ್ತು ಅದನ್ನು ಕಠ್ಮಂಡುವಿಗೆ ಸಾಗಿಸಲಾಗುತ್ತದೆ.

ಏನಿದು ಕಪ್ಪು ಪೆಟ್ಟಿ : ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಎಂದೂ ಕರೆಯಲ್ಪಡುವ ಕಪ್ಪು ಪೆಟ್ಟಿಗೆಯು ರೇಡಿಯೊ ಪ್ರಸರಣಗಳು ಮತ್ತು ಕಾಕ್‌ಪಿಟ್‌ನಲ್ಲಿರುವ ಇತರ ಶಬ್ದಗಳನ್ನು ರೆಕಾರ್ಡ್ ಮಾಡುತ್ತದೆ. ಉದಾಹರಣೆಗೆ ಪೈಲಟ್‌ಗಳ ನಡುವಿನ ಸಂಭಾಷಣೆಗಳು ಮತ್ತು ಎಂಜಿನ್ ಶಬ್ಧಗಳು. ಇತ್ತೀಚಿನ ವಿಮಾನಗಳು ಎರಡು ಕಪ್ಪು ಪೆಟ್ಟಿಗೆಗಳನ್ನು ಹೊಂದಿದ್ದು, ಇದು ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ಸಹ ಒಳಗೊಂಡಿರುತ್ತದೆ.

ವೇಗ, ಎತ್ತರ ಮತ್ತು ದಿಕ್ಕು, ಹಾಗೆಯೇ ಪೈಲಟ್ ಕ್ರಮಗಳು ಮತ್ತು ಪ್ರಮುಖ ವ್ಯವಸ್ಥೆಗಳ ಕಾರ್ಯಕ್ಷಮತೆಯಂತಹ 80ಕ್ಕೂ ಹೆಚ್ಚು ವಿವಿಧ ರೀತಿಯ ಮಾಹಿತಿಯನ್ನು ಇದು ದಾಖಲಿಸುತ್ತದೆ. ಈಗ ವಿಮಾನದಲ್ಲಿದ್ದ ಎಲ್ಲಾ 22 ಜನರು ಸಾವನ್ನಪ್ಪಿದ ಅಪಘಾತದ ಬಗ್ಗೆ ಕಪ್ಪು ಪೆಟ್ಟಿಗೆಯು ಪ್ರಮುಖ ಸುಳಿವುಗಳನ್ನು ನೀಡುತ್ತದೆ.

ಇದನ್ನೂ ಓದಿ:ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಮೀರ್ ಅಹ್ಮದ್ ಖಾನ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ

ABOUT THE AUTHOR

...view details