ಕರ್ನಾಟಕ

karnataka

ETV Bharat / bharat

ರಾಯಗಢ ಸಮುದ್ರದಲ್ಲಿ ಪತ್ತೆಯಾದ ಬೋಟ್​ ಆಸ್ಟ್ರೇಲಿಯಾಗೆ ಸೇರಿದ್ದು: ಫಡ್ನವೀಸ್​ - Etv bharat kannada

ಮಹಾರಾಷ್ಟ್ರದ ರಾಯಗಢ ಸಮುದ್ರ ಪ್ರದೇಶದಲ್ಲಿ ಪತ್ತೆಯಾಗಿರುವ ದೋಣಿ ಹಾಗೂ ಶಸ್ತ್ರಾಸ್ತ್ರ ಆಸ್ಟ್ರೇಲಿಯಾಗೆ ಸೇರಿದ್ದಾಗಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದರು.

Devendra Fadnavis
Devendra Fadnavis

By

Published : Aug 18, 2022, 4:17 PM IST

Updated : Aug 18, 2022, 4:59 PM IST

ಮುಂಬೈ(ಮಹಾರಾಷ್ಟ್ರ): ರಾಯಗಢ ಸಮುದ್ರದ ಬಳಿ ಪತ್ತೆಯಾಗಿರುವ ಅನುಮಾನಾಸ್ಪದ ಬೋಟ್​ ಹಾಗೂ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ವಶಪಡಿಸಿಕೊಂಡಿರುವ ಬೋಟ್ ಆಸ್ಟ್ರೇಲಿಯಾಗೆ ಸೇರಿದ್ದಾಗಿದೆ. ಇದು ಮಸ್ಕತ್ ಮೂಲಕ ಯುರೋಪ್‌ಗೆ ತೆರಳಬೇಕಾಗಿತ್ತು ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಈ ದೋಣಿ ಆಸ್ಟ್ರೇಲಿಯಾದ ಪ್ರಜೆಯದ್ದು. ಸಮುದ್ರದಲ್ಲಿ ಇಂಜಿನ್ ಹಾಳಾಗಿರುವ ಕಾರಣ ಅದರಲ್ಲಿದ್ದ ಜನರನ್ನು ಕೊರಿಯಾದ ಬೋಟ್‌ನಿಂದ ರಕ್ಷಿಸಲಾಗಿದೆ. ಇದೀಗ ಹರಿಹರೇಶ್ವರ ಕಡಲತೀರ ತಲುಪಿದೆ ಎಂದರು.

ಇದನ್ನೂ ಓದಿ:ಮಹಾರಾಷ್ಟ್ರದ ರಾಯಗಢದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಬೋಟ್‌ ಪತ್ತೆ: ಪೊಲೀಸರಿಂದ ಕಟ್ಟೆಚ್ಚರ

ದೋಣಿಯಲ್ಲಿ ಮೂರು ಎಕೆ 47 ರೈಫಲ್​​ಗಳಿದ್ದವು. ಸಮುದ್ರದಲ್ಲಿ ಉಬ್ಬರವಿಳಿತದ ಕಾರಣ ಅರ್ಧ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕೇಂದ್ರೀಯ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯದ ಮಾಹಿತಿ ಇಲ್ಲ. ಆದರೆ, ಎಲ್ಲ ರೀತಿಯಿಂದಲೂ ತನಿಖೆ ಮಾಡುತ್ತೇವೆ. ಬರುವ ದಿನಗಳಲ್ಲಿ ಹೆಚ್ಚಿನ ಹಬ್ಬಗಳಿರುವ ಕಾರಣ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.

Last Updated : Aug 18, 2022, 4:59 PM IST

ABOUT THE AUTHOR

...view details