ಗೋಪಾಲಗಂಜ್(ಬಿಹಾರ): ರೈತರಿದ್ದ ದೋಣಿಯೊಂದು ಮುಳುಗಿ 21 ಮಂದಿ ಕಾಣೆಯಾಗಿರುವ ಘಟನೆ ಬಿಹಾರ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಮೂವರ ಮೃತದೇಹ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ದೋಣಿ ಮುಳುಗಿ 21 ಮಂದಿ ಕಣ್ಮರೆ, ಮೂವರ ಶವ ಪತ್ತೆ - ಗಂಡಕ್ ನದಿಯೊಳಗೆ ಮುಳುಗಿದ ದೋಣಿ
ಬಿಹಾರದ ಗೋಪಾಲ್ಗಂಜ್ನ ಗಂಡಕ್ ನದಿಯಲ್ಲಿ ದೋಣಿ ಮುಳುಗಿ ಮೂವರು ಸಾವನ್ನಪ್ಪಿದ್ದು, 21 ಮಂದಿ ಕಾಣೆಯಾಗಿರುವ ಘಟನೆ ನಡೆದಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಬಿಹಾರದಲ್ಲಿ ದೋಣಿ ಮುಳಗಿ 21 ಮಂದಿ ಕಣ್ಮರೆ, ಮೂವರ ಶವ ಪತ್ತೆ
ಬೆಟ್ಟಿಯಾ - ಗೋಪಾಲ್‌ಗಂಜ್ ಗಡಿಯಲ್ಲಿರುವ ಭಗವಾನ್‌ಪುರ ಗ್ರಾಮದ ಬಳಿಯಿರುವ ಗಂಡಕ್ ನದಿಯಲ್ಲಿ ದುರಂತ ಸಂಭವಿಸಿದ್ದು, ದೋಣಿಯಲ್ಲಿ ಕುಚಯ್‌ಕೋಟ್ ಮತ್ತು ವಿಷಂಭರಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ರೈತರಿದ್ದರು ಎಂದು ಮೂಲಗಳು ತಿಳಿಸಿವೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ರಸ್ತೆಯಲ್ಲೇ ಅಜ್ಜನನ್ನು ಎಳೆದಾಡಿ ಕೊಲೆ ಮಾಡಿದ ಮೊಮ್ಮಗ!... ವಿಡಿಯೋ ವೈರಲ್
Last Updated : Jan 19, 2022, 1:03 PM IST